ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಮಾವಿನ ಹಣ್ಣಿನ ವಿವಿಧ ತಿಂಡಿಗಳು ಅಂದ್ರೆ ಅಚ್ಚುಮೆಚ್ಚು. ಈಗ ಈ ಸಾಲಿಗೆ ಹೊಸ ಸೇರ್ಪಡೆ ಅಂದರೆ ಮ್ಯಾಂಗೋ ಪರಾಠ. ಹೌದು, ಹೆಸರು ಕೇಳಿದರೆ ಕೌತುಕವೆನಿಸುತ್ತೆ, ಆದರೆ ಬಾಯಿಗೆ ಬೀಳುವ ರುಚಿ ಯಾವತ್ತಿಗೂ ಮರೆಲಾಗದು.
ಬೇಕಾಗುವ ಪದಾರ್ಥಗಳು
ಗೋಧಿ ಹಿಟ್ಟು – 2 ಕಪ್
ಉಪ್ಪು – 1/2 ಚಮಚ
ಎಣ್ಣೆ ಅಥವಾ ತುಪ್ಪ – 1 ಚಮಚ
ನೀರು – ಅಗತ್ಯಕ್ಕೆ ತಕ್ಕಷ್ಟು (ಹಿಟ್ಟು ಕಲಸಲು)
ಮ್ಯಾಂಗೋ (ಮಾವಿನ ಹಣ್ಣಿನ ತಿರುಳು) – 1 ಕಪ್
ಸಕ್ಕರೆ – 2 ರಿಂದ 3 ಚಮಚ
ಏಲಕ್ಕಿ ಪುಡಿ – 1/2 ಚಮಚ
ಸೋಂಪು – 1/2 ಚಮಚ
ತುಪ್ಪ ಅಥವಾ ಎಣ್ಣೆ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು, ಉಪ್ಪು, ತುಪ್ಪ ಹಾಕಿ ಮಿಕ್ಸ್ ಮಾಡಿ. ನೀರು ಸೇರಿಸಿ ಮೃದುವಾದ ಹಿಟ್ಟಾಗಿ ಕಲಸಿ. ಮುಚ್ಚಿ 15-20 ನಿಮಿಷ ಬಿಡಿ.
ಸ್ಟಫಿಂಗ್ ತಯಾರಿ: ಬಾಣಲೆಗೆ ಮಾವಿನ ತಿರುಳು, ಸಕ್ಕರೆ, ಏಲಕ್ಕಿ ಪುಡಿ, ಸೋಂಪು ಹಾಕಿ ಬೆರೆಸಿ. ನೀರು ಆವಿಯಾಗುವವರೆಗೆ ಬೇಯಿಸಿ. ಗಟ್ಟಿ ಪೇಸ್ಟ್ ಆಗಬೇಕು. ನಂತರ ತಣ್ಣಗಾಗಲು ಬಿಡಿ.
ಈಗ ಹಿಟ್ಟಿನಿಂದ ಉಂಡೆ ತೆಗೆದು ಸ್ವಲ್ಪ ಲಟ್ಟಿಸಿ. ಮಧ್ಯದಲ್ಲಿ ಮ್ಯಾಂಗೋ ಸ್ಟಫಿಂಗ್ ಹಾಕಿ ಮುಚ್ಚಿ. ಸ್ವಲ್ಪ ಒತ್ತಿನಲ್ಲಿ ಪುನಃ ಲಟ್ಟಿಸಿ. ಸ್ಟಫಿಂಗ್ ಹೊರಬರದಂತೆ ನೋಡಿಕೊಳ್ಳಿ. ಈಗ ಬಿಸಿ ತವದಲ್ಲಿ ಪರಾಠ ಹಾಕಿ, ಎರಡು ಬದಿಯೂ ತುಪ್ಪ ಹಾಕಿ ಗೋಲ್ಡನ್ ಕಲರ್ ಬರೋವರೆಗೆ ಬೇಯಿಸಿಕೊಂಡರೆ ಮ್ಯಾಂಗೋ ಪರಾಠ ರೆಡಿ.