ಇಂದು ಹುಟ್ಟೂರಿನಲ್ಲಿ ತಾಯಿಯ ಸಮಾಧಿ ಬಳಿಯೇ ಸರೋಜಾದೇವಿ ಅಂತ್ಯಸಂಸ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿರಿಯ ನಟಿ ಬಿ. ಸರೋಜಾದೇವಿ ಅವರ ಅಂತ್ಯಸಂಸ್ಕಾರ ಇಂದು ಹುಟ್ಟೂರಾದ ಚನ್ನಪಟ್ಟಣದ ದಶಾವರದಲ್ಲಿ ನಡೆಯಲಿದೆ. ತಾಯಿಯ ಸಮಾಧಿ ಪಕ್ಕವೇ ಅಂತ್ಯಸಂಸ್ಕಾರ ನಡೆಯಲಿದೆ.

ಈ ಹಿಂದೆ, ಸರೋಜಾದೇವಿ ಬರೆದ ವ್ಹಿಲ್ ಪ್ರಕಾರ, ಗಂಡ ಹರ್ಷ ಸಮಾಧಿ ಪಕ್ಕವೇ ಕೊಡಿಗೇಹಳ್ಳಿಯ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕಿತ್ತು. ಆದರೆ ಸರೋಜಾದೇವಿ ತೋಟದ ಪಕ್ಕ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿರುವುದರಿಂದ  ಚನ್ನಪಟ್ಟಣದ ದಶಾವರದ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಇಂದು ಬೆಳಗ್ಗೆ 10 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಪಾರ್ಥಿವ ಶರೀರವನ್ನು ಚನ್ನಪಟ್ಟಣದತ್ತ ಸಾಗಿಸಲಾಗುತ್ತದೆ. ಈ ವೇಳೆ ದಾರಿಯುದ್ದಕ್ಕೂ ಅಭಿಮಾನಿಗಳು ಅಂತಿಮನಮನ ಸಲ್ಲಿಸಲಿದ್ದಾರೆ. ಚನ್ನಪಟ್ಟಣದ ಗಾಂಧಿ ಭವನದ ಬಳಿ ಸಾರ್ವಜನಿಕ ದರ್ಶನದ ಬಳಿಕ ಹುಟ್ಟೂರಿಗೆ ತರಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!