ಸೀಫುಡ್ ಪ್ರಿಯರಿಗೆ ಮನಮೆಚ್ಚುವ ಸ್ಪೆಷಲ್ ಅಡುಗೆಗಳಲ್ಲಿ ಬಟರ್ ಗಾರ್ಲಿಕ್ ಸ್ಕ್ವಿಡ್ ಒಂದು. ಬೆಣ್ಣೆ ಮತ್ತು ಬೆಳ್ಳುಳ್ಳಿಯ ಸೊಗಡಿನೊಂದಿಗೆ ಸ್ಕ್ವಿಡ್ ಅನ್ನು ಬೇಯಿಸಿ ತಯಾರಿಸುವ ಈ ರುಚಿಕರ ತಿನಿಸು ಊಟದ ಜೊತೆ ಅದ್ಭುತ ರುಚಿ ನೀಡುತ್ತದೆ. ಅನ್ನ ಅಥವಾ ಚಪಾತಿಯೊಂದಿಗೆ ತಿನ್ನಲು ತುಂಬಾ ರುಚಿಕರ.
ಬೇಕಾಗುವ ಪದಾರ್ಥಗಳು:
ಸ್ಕ್ವಿಡ್ – ಅರ್ಧ ಕೆಜಿ
ಬೆಣ್ಣೆ – 4 ಟೀಸ್ಪೂನ್
ಕೊಚ್ಚಿದ ಬೆಳ್ಳುಳ್ಳಿ – 4
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಮಾಡುವ ವಿಧಾನ:
ಮೊದಲು ಸ್ಕ್ವಿಡ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಉಂಗುರದ ಆಕಾರದಲ್ಲಿ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ದೊಡ್ಡ ಬಾಣಲೆಗೆ ಬೆಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಅದಕ್ಕೆ ಕೊಚ್ಚಿದ ಬೆಳ್ಳುಳ್ಳಿಯನ್ನು ಹಾಕಿ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ.
ಇದೀಗ ಸ್ಕ್ವಿಡ್ ತುಂಡುಗಳನ್ನು ಸೇರಿಸಿ, 2-3 ನಿಮಿಷಗಳವರೆಗೆ ಅರೆಪಾರದರ್ಶಕವಾಗಿ ತಿರುಗುವವರೆಗೆ ಬೇಯಿಸಿ. ನಂತರ ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.