ಹೊಸದಿಗಂತ ವರದಿ ಹಾವೇರಿ:
ಬೆಂಗಳೂರು ಕಾರಾಗೃಹ ಎಸ್ಪಿಯಾಗಿದ್ದ ಯಶೋಧಾ ವಂಟಗೋಡಿ ಅವರನ್ನು ಹಾವೇರಿ ಎಸ್ಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಜಿಲ್ಲಾ ಪೊಲೀಸ್ ಎಸ್‌ಪಿಯಾಗಿದ್ದ ಅಂಶುಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಯಶೋಧಾ ವಂಟಗೋಡಿ ಅವರನ್ನು ವರ್ಗಾಯಿಸಲಾಗಿದೆ.
ರಾಜ್ಯದ 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನೂತನ ಎಸ್ಪಿ ಯಶೋಧಾ ವಂಟಗೋಡಿ ಮಂಗಳವಾರ ಅಧಿಕಾರ ಸ್ವೀಕಾರ ಮಾಡುವ ಸಾಧ್ಯತೆ ಇದೆ.