ಪ್ರತಿದಿನ ಕಿರಿಕಿರಿ ಮಾಡ್ತಿದ್ದ ಮ್ಯಾನೇಜರ್‌ಗೆ 15 ಬಾರಿ ಇರಿದು ಕೊಂದ ಉದ್ಯೋಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿ ಪ್ರತಿದಿನ ತನಗೆ ಮಾನಸಿಕವಾಗಿ ಹಿಂಸೆ ನೀಡುತ್ತಾನೆ ಎಂದು ಮ್ಯಾನೇಜರ್​ಗೆ 15 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾಳೆ.

ಈ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇಲ್ಲಿನ  ಮಿಚಿಗನ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್​​​ನಲ್ಲಿ ಅಫೆನಿ ಮುಹಮ್ಮದ್ ಎಂಬ 26 ವರ್ಷದ ಮಹಿಳೆ ಮ್ಯಾನೇಜರ್ ಜೆನ್ನಿಫರ್ ಹ್ಯಾರಿಸ್ (39 ವರ್ಷ) ಮೇಲೆ ಸತತ 15 ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ.

ಅಫೆನಿ ಮುಹಮ್ಮದ್ ಎಂಬ ಮಹಿಳಾ ಉದ್ಯೋಗಿ ಕೋಪದ ಭರದಲ್ಲಿ ತನ್ನ ಮ್ಯಾನೇಜರ್ ಜೆನ್ನಿಫರ್ ಹ್ಯಾರಿಸ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.  ಈ ಘಟನೆ ಜುಲೈ 12 ರಂದು ನಡೆದಿದ್ದು, ಕೆಲಸದ ವಿಚಾರವಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಪ್ರತಿದಿನ ಮ್ಯಾನೇಜರ್​​ ಬಂದು ನೀನು ಕಡಿಮೆ ಕೆಲಸ ಮಾಡುತ್ತಿದ್ದೀಯಾ, ಕಳಪೆ ಕಾರ್ಯಕ್ಷಮತೆ ಇದೆ ಎಂದು ಪದೇ ಪದೇ ಮನೆಗೆ ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಕೋಪಗೊಂಡು ಅಫೆನಿ ಮುಹಮ್ಮದ್ ಮ್ಯಾನೇಜರ್​​ ಮೇಲೆ ಈ ದಾಳಿ ಮಾಡಿದ್ದಾಳೆ ಎಂದು ಹೇಳಲಾಗಿದೆ.

ಅಫೆನಿ ಮುಹಮ್ಮದ್ ಮ್ಯಾನೇಜರ್​​​ನ್ನು ಕೊಲೆ ಮಾಡುವ ಹಿಂದಿನ ದಿನ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಖಾತೆಗಳಲ್ಲಿ ತನ್ನ ಮ್ಯಾನೇಜರ್​​​ ಬಗ್ಗೆ ಕೋಪದಲ್ಲಿ ಕೆಲವೊಂದು ಸ್ಟೋರಿಗಳನ್ನು ಹಾಕಿದ್ದಾಳು. ತನ್ನ ಮ್ಯಾನೇಜರ್​​​ ನನ್ನನ್ನೂ ತುಂಬಾ ಕೀಳಾಗಿ ನೋಡುತ್ತಾನೆ. ನಾನು ಇದನ್ನು ಇನ್ನು ಮುಂದೆ ಸಹಿಸಲಾರೆ ಎಂದು ಹಾಕಿದ್ದಳು. ಮರುದಿನ ಮತ್ತೆ ಈ ವಿಚಾರವಾಗಿ ಇಬ್ಬರ ನಡುವೆ ವಾದಗಳು ನಡೆದಿದೆ. ಮತ್ತೆ ಮ್ಯಾನೇಜರ್​​​ ಮನೆಗೆ ಕಳುಹಿಸಿದ್ದಾನೆ. ಇದರಿಂದ ಕೋಪಗೊಂಡು ಮಹಿಳೆ ತನ್ನ ಕಾರಿನ ಬಳಿ ಹೋಗಿ, ಕಾರಿನಲ್ಲಿದ್ದ ಚಾಕುವನ್ನು ತಂದು ಮ್ಯಾನೇಜರ್​​​ಗೆ 15 ಬಾರಿ ಇರಿದಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!