ಇತ್ತೀಚಿಗೆ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದ ಸುದ್ದಿಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಇಂಥ ಘಟನೆಗಳ ನಂತರ ವಿಮಾನ ಪ್ರಯಾಣದ ಸುರಕ್ಷತೆ ಬಗ್ಗೆ ಚರ್ಚೆ ನಡೆಯುವುದು ಸಹಜ. ಹೀಗಾಗಿ ಈಗ ವಿಮಾನದಲ್ಲಿ ಯಾವ ಸೀಟ್ safest ಆಗಿರತ್ತೆ?” ಯಾವ ಸ್ಥಳದಲ್ಲಿದ್ರೆ ಅಪಘಾತವಾದರೂ ಪಾರಾಗೋ ಸಾಧ್ಯತೆ ಹೆಚ್ಚು? ಅನ್ನೋ ಪ್ರಶ್ನೆ ಬರೋದು ಸಾಮಾನ್ಯ. ಹಾಗಾದರೆ, ತಜ್ಞರು, ಅಧ್ಯಯನಗಳು ಮತ್ತು ಲಭ್ಯವಿರುವ ಅಂಕಿಅಂಶಗಳ ಪ್ರಕಾರ ವಿಮಾನದಲ್ಲಿ ಸುರಕ್ಷಿತ ಸೀಟ್ ಯಾವುದು ಎಂಬುದನ್ನು ಇಲ್ಲಿ ತಿಳಿಯೋಣ.
ಹಿಂಭಾಗದ ಸೀಟ್ ಹೆಚ್ಚು ಸುರಕ್ಷಿತ
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ಇತರ ವಿಮಾನಯಾನ ಸಂಸ್ಥೆಗಳ ಅಧ್ಯಯನಗಳ ಪ್ರಕಾರ, ವಿಮಾನದ ಹಿಂಭಾಗದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಮುಂಭಾಗದವರಿಗಿಂತ ಜೀವಿತಾವಕಾಶ ಹೆಚ್ಚು ಇರುತ್ತದೆ. ವಿಮಾನ ಅಪಘಾತಗಳು ಸಂಭವಿಸಿದಾಗ ಸಾಮಾನ್ಯವಾಗಿ ಮುಂಭಾಗಕ್ಕೇ ಹೆಚ್ಚು ಪರಿಣಾಮ ಬೀಳುತ್ತದೆ. ಹೀಗಾಗಿ ಹಿಂಬದಿಯವರು ಪಾರಾಗುವ ಸಾಧ್ಯತೆ ಹೆಚ್ಚು – ಸುಮಾರು 69% ಎಂದು ಒಂದು ಅಧ್ಯಯನ ತಿಳಿಸಿದೆ.
ವಿಂಗ್ ಭಾಗದ ಸೀಟ್‌ಗಳು ಕೂಡ relatively safe
ವಿಮಾನದ ರೆಕ್ಕೆ ಭಾಗದ ಬಳಿ ಇರುವ ಸೀಟ್‌ಗಳು ತುರ್ತು ನಿರ್ಗಮನದ ಬಾಗಿಲುಗಳಿಗೆ ಹತ್ತಿರವಾಗಿರುವುದರಿಂದ, ತಕ್ಷಣ ಹೊರಬರಲು ನೆರವಾಗುತ್ತದೆ. ಇದರಿಂದಾಗಿ ಇವೆಲ್ಲಾ “ಮಧ್ಯ ಮಟ್ಟದ ಸುರಕ್ಷಿತ ಸೀಟ್‌ಗಳು” ಎನ್ನಬಹುದು. ಈ ಭಾಗದಲ್ಲಿ ಕುಳಿತುಕೊಳ್ಳುವವರಿಗೆ 59% ಬದುಕುಳಿಯುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
ಮುಂಭಾಗದ ಸೀಟ್ – ಕಡಿಮೆ ಜೀವಿತಾವಕಾಶ
ವಿಮಾನದ ಮುಂಭಾಗದಲ್ಲಿ ಕುಳಿತವರು ಅಪಘಾತ ಸಂಭವಿಸಿದಾಗ 49% ಮಾತ್ರ ಬದುಕುಳಿಯುವ ಸಾಧ್ಯತೆ ಹೊಂದಿದ್ದಾರೆ ಎಂದು ಅಧ್ಯಯನದ ಹೇಳುತ್ತದೆ. ಏಕೆಂದರೆ, ಅಪಘಾತಗಳ ತೀವ್ರತೆ ಸಾಮಾನ್ಯವಾಗಿ ಮುಂಭಾಗದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ನಿರ್ಗಮನದ ಬಳಿಯ ಸೀಟ್‌ಗಳು ತುರ್ತು ಪರಿಸ್ಥಿತಿಗೆ ಅನುಕೂಲ
ವಿಮಾನದಲ್ಲಿ “ಎಮರ್ಜೆನ್ಸಿ ಎಕ್ಸಿಟ್” ಹತ್ತಿರದ ಸೀಟ್‌ಗಳಲ್ಲಿ ಕುಳಿತುಕೊಳ್ಳುವುದು ತುರ್ತು ಪರಿಸ್ಥಿತಿಯಲ್ಲೂ ಸುಲಭವಾಗಿ ವಿಮಾನದಿಂದ ಹೊರಬರಲು ಸಹಾಯ ಮಾಡುತ್ತದೆ. ಇದರಿಂದಾಗಿ, ಇವುಗಳೂ ಹೆಚ್ಚು ಸುರಕ್ಷಿತವೆಂಬ ದರ್ಜೆಗೆ ಬರಬಹುದು – ಆದರೆ ಇದರೊಂದಿಗೆ ಜವಾಬ್ದಾರಿ ಕೂಡ ಇರುತ್ತದೆ.
ಕಿಟಕಿ ಪಕ್ಕದ ಸೀಟ್ – ಹೆಚ್ಚು ಸುರಕ್ಷಿತವಲ್ಲ
ಬಹುತೇಕ ಸಂದರ್ಭಗಳಲ್ಲಿ ಕಿಟಕಿ ಪಕ್ಕದ ಸೀಟ್‌ಗಳನ್ನು ಹೆಚ್ಚು ಅಪಾಯದವುಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಈ ಭಾಗದಲ್ಲಿ ತುರ್ತು ನಿರ್ಗಮನಕ್ಕೆ ತಕ್ಷಣದ ಪ್ರವೇಶವಿಲ್ಲ ಮತ್ತು ಹೊರಬರುವ ಮಾರ್ಗ ನಿರ್ಬಂಧಿತವಾಗಿರುತ್ತದೆ.
ವಿಮಾನದ ಹಿಂಭಾಗ, ತುರ್ತು ನಿರ್ಗಮನದ ಹತ್ತಿರದ ಸೀಟ್‌ಗಳು ಮತ್ತು ಮಧ್ಯದ ಸೀಟ್‌ಗಳು ಅಪಘಾತದ ಸಂದರ್ಭದಲ್ಲಿ ಹೆಚ್ಚು ಜೀವಿತಾವಕಾಶ ಹೊಂದಿವೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಆದರೆ ಇದು ಎಲ್ಲಾ ಸಂದರ್ಭಗಳಿಗೂ ಅನ್ವಯಿಸದು. ವಿಮಾನ ದುರಂತದ ತೀವ್ರತೆ, ವಿಮಾನದ ಮಾದರಿ ಮತ್ತು ಅನೇಕ ಇತರ ಅಂಶಗಳ ಮೇಲೆ ಬದುಕುಳಿಯುವ ಸಾಧ್ಯತೆ ನಿರ್ಧಾರವಾಗುತ್ತದೆ.