ನಿಮಿಷ ಪ್ರಿಯಾ ಗಲ್ಲು ಶಿಕ್ಷೆಗೆ ತಾತ್ಕಾಲಿಕ ಬ್ರೇಕ್ ಹಾಕಿದ ಯೆಮೆನ್ ಸರಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಮೂಲಕ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ನಿರ್ಧಾರಕ್ಕೆ ಯಮೆನ್ ದೇಶ ತಾತ್ಕಾಲಿಕ ಬ್ರೇಕ್ ಹಾಕಿದೆ ಎಂದು ವರದಿಯಾಗಿದೆ.

ಭಾರತದ ಸೂಫಿ ವಿದ್ವಾಂಸರ ಜೊತೆ ಭಾರತ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಇದರ ಪರಿಣಾಮ ಜುಲೈ 16ರಂದು ನಿಗಧಿಯಾಗಿದ್ದ ಗಲ್ಲು ಶಿಕ್ಷೆಯನ್ನು ಯೆಮೆನ್ ಮುಂದೂಡಿದೆ. ಯೆಮೆನ್ ಹಾಗೂ ಭಾರತದ ಮಹತ್ವದ ಮಾತುಕತೆಯಿಂದ ಸದ್ಯಕ್ಕೆ ರಿಲೀಫ್ ಸಿಕ್ಕಿದೆ.

2017ರಲ್ಲಿ ತಲಾಲ್ ಅಬ್ದೋ ಮಹೆದಿ ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ ಯೆಮೆನ್ ಕೋರ್ಟ್, ಗಲ್ಲು ಶಿಕ್ಷೆ ವಿಧಿಸಿತ್ತು.ಜುಲೈ 16ಕ್ಕೆ ಗಲ್ಲು ಶಿಕ್ಷೆ ನಿಗದಿಯಾಗಿತ್ತು.

ಯೆಮನ್ ಜೈಲಿನಲ್ಲಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾಳ ಬಿಡುಗಡೆಗೆ ಬೆಂಬಲ ನೀಡುವುದಾಗಿ ಉದ್ಯಮಿ ಎಂ.ಎ. ಯೂಸುಫ್ ಅಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. ನಿಮಿಷಾ ಪ್ರಿಯಾಳ ಬಿಡುಗಡೆಗೆ ಯೂಸುಫ್ ಅಲಿ ಮಧ್ಯಪ್ರವೇಶಿಸುತ್ತಿರುವುದಾಗಿ ನ್ಯಾಯಮೂರ್ತಿ ಕುರ್ಯನ್ ಜೋಸೆಫ್ ತಿಳಿಸಿದ್ದಾರೆ. ಚರ್ಚೆ ಮತ್ತು ಹಣ ಸಂಗ್ರಹಣೆಯಲ್ಲಿ ಯೂಸುಫ್ ಅಲಿಯವರ ಸಹಕಾರ ಇರುತ್ತದೆ ಎಂದವರು ಹೇಳಿದರು. ಭಾರತದ ತಂಡವು ಯೆಮನ್‌ನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!