ಚಪಾತಿ ಎಲ್ಲರಿಗು ಇಷ್ಟವಾಗೋ ತಿಂಡಿ. ಮಕ್ಕಳಿಗೂ ಕೂಡ. ಆದ್ರೆ ಪ್ರತಿದಿನ ಪ್ಲೈನ್ ಚಪಾತಿ ಮಾಡಿದ್ರೆ ಯಾರು ಇಷ್ಟ ಪಟ್ಟು ತಿಂತಾರೆ ಅಲ್ವ. ಅದಿಕ್ಕೆ ಇವತ್ತು ನಾವು ವಿಶೇಷ ರುಚಿಯ ಪಾಲಕ್-ಪನೀರ್ ಚಪಾತಿ ಮಾಡೋದು ಹೇಗಂತಾ ತಿಳಿದ್ಕೊಳ್ಳೋಣ
ಬೇಕಾಗುವ ಪದಾರ್ಥಗಳು:
ಪಾಲಕ್ ಸೊಪ್ಪು
ಪನೀರ್ – 100 ಗ್ರಾಂ
ಗೋಧಿ ಹಿಟ್ಟು
ಹಸಿ ಮೆಣಸಿನ ಕಾಯಿ
ಹಸಿ ಶುಂಠಿ
ಎಣ್ಣೆ
ತುಪ್ಪು (ರುಚಿಗೆ ತಕ್ಕಷ್ಟು)
ಉಪ್ಪು (ರುಚಿಗೆ ತಕ್ಕಷ್ಟು)
ಮಾಡುವ ವಿಧಾನ
ಮೊದಲು ಪಾಲಕ್ ಸೊಪ್ಪು, ಪನೀರ್ , ಹಸಿ ಮೆಣಸು, ಹಸಿ ಶುಂಠಿ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಒಂದು ಬೌಲ್ಗೆ ಗೋಧಿ ಹಿಟ್ಟು ಹಾಕಿಕೊಂಡು ನಂತರ ಪುಡಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ರುಬ್ಬಿದ ಮಸಾಲೆ ಸೇರಿಸಿ ಮಿಕ್ಸ್ ಮಾಡಿ, ಚಪಾತಿ ಹಿಟ್ಟು ಹದಕ್ಕೆ ಮಾಡಿಕೊಂಡು ಎಣ್ಣೆ ಹಾಕಿ ಕಲಸಿಕೊಂಡು, 15 ನಿಮಿಷ ಮುಚ್ಚಿ ಇಡಬೇಕು.
15 ನಿಮಿಷಗಳ ಬಳಿಕ ಉಂಡೆ ಮಾಡಿಕೊಂಡು ಲಟ್ಟಣಿಗೆ ಬಳಸಿ ಚಪಾತಿ ಮಾಡಿ ಎರಡು ಬದಿ ಬೇಯಿಸಿದರೆ ಪಾಲಕ್-ಪನೀರ್ ಚಪಾತಿ ರೆಡಿ.