Body Care | ಸ್ನಾನ ಮಾಡಿದಮೇಲೂ ದೇಹದಿಂದ ದುರ್ವಾಸನೆ ಬರ್ತಿದ್ಯಾ? ಕಾರಣ ಇದೇ ನೋಡಿ!

ಚಳಿ ಇರಲಿ, ಮಳೆಗಾಲವಾಗಿರಲಿ, ಕೆಲವರು ಸ್ವಲ್ಪ ಹೊತ್ತು ನಡೆಯುತ್ತಿದ್ದರೂ ಬೆವರು ಬಹಳವಾಗಿ ಬರುತ್ತದೆ. ಇದರ ಜೊತೆಗೆ ದೇಹದಿಂದ ಬರುವ ದುರ್ವಾಸನೆ ಅವರಿಗೆ ಮುಜುಗರ ತರುತ್ತದೆ. ಸ್ನಾನ ಮಾಡಿದ ಮೇಲೆಯೂ ಈ ವಾಸನೆ ಹೋಗದೆ ಇರುವುದು ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಈ ರೀತಿಯ ದೇಹದ ವಾಸನೆಯ ಸಮಸ್ಯೆಗೆ ಹಲವಾರು ಕಾರಣಗಳಿವೆ.

Unhappy man cartoon character suffering from terrible bad smelling clothes with dirty sweaty stains Unhappy young man cartoon character suffering from terrible bad smelling clothes with dirty sweaty stains vector illustration. Stink body odor problem, excessive sweating and hyperhidros disorder body smell bad stock illustrations

ಬ್ಯಾಕ್ಟೀರಿಯಾ ಬೆಳವಣಿಗೆ:
ದೇಹದಲ್ಲಿ ಸ್ವಲ್ಪ ತೇವಾಂಶ ಉಳಿದರೂ ಅದು ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಬೆವರಿನೊಂದಿಗೆ ಸೇರಿದಾಗ ದುರ್ವಾಸನೆ ಉಂಟುಮಾಡುತ್ತವೆ. ವಿಶೇಷವಾಗಿ ಕಂಕುಳ, ಬೆರಳಿನ ಮಧ್ಯೆ ಹಾಗೂ ಕಾಲುಪಾದಗಳಲ್ಲಿ ಇವು ಹೆಚ್ಚು ಬೆಳೆದು ವಾಸನೆ ಮೂಡಿಸುತ್ತವೆ.
ಮುನ್ನೆಚ್ಚರಿಕೆ: ಸ್ನಾನದ ವೇಳೆ ಈ ಭಾಗಗಳನ್ನು ಚೆನ್ನಾಗಿ ತೊಳೆಯಬೇಕು ಮತ್ತು ಆಂಟಿಬ್ಯಾಕ್ಟೀರಿಯಲ್ ಬಾಡಿ ವಾಶ್ ಅಥವಾ ಸಾಬೂನು ಬಳಸುವುದು ಉತ್ತಮ.

Armpit stink, smelling and a man on the sofa with a hygiene or bacteria problem. Bad, home and an Asian person with body odor, underarm sweat or grooming issue on the living room couch after work Armpit stink, smelling and a man on the sofa with a hygiene or bacteria problem. Bad, home and an Asian person with body odor, underarm sweat or grooming issue on the living room couch after work body smell bad stock pictures, royalty-free photos & images

ತಪ್ಪಾದ ಉತ್ಪನ್ನಗಳ ಬಳಕೆ:
ಬಾಡಿ ವಾಶ್‌ಗಳು ಅಥವಾ ಸೋಪುಗಳು ವಾಸನೆ ಮಾತ್ರ ನಿಗ್ರಹಿಸಬಹುದು ಆದರೆ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವುದಿಲ್ಲ.
ಮುನ್ನೆಚ್ಚರಿಕೆ: ಉತ್ತಮ ಗುಣಮಟ್ಟದ ಆಂಟಿಬ್ಯಾಕ್ಟೀರಿಯಲ್ ಕ್ಲೆನ್ಸರ್ ಅಥವಾ ಡಿಯೋಡರೆಂಟ್‌ಗಳ ಬಳಕೆ ಶಿಫಾರಸು ಮಾಡಲಾಗುತ್ತದೆ.

Woman washing with bath sponge in shower Woman washing with shower gel foam and bath sponge while showering side view body wash stock pictures, royalty-free photos & images

ಬಟ್ಟೆ ಹಾಗೂ ಟವಲ್‌ನ ಅಸಮರ್ಪಕ ಬಳಕೆ:
ಒಂದೇ ಬಟ್ಟೆ ಅಥವಾ ಟವಲ್ ಅನ್ನು ವಾರದವರೆಗೂ ಬಳಸುವುದು ಸಾಮಾನ್ಯವಾದ ತಪ್ಪು. ಇವು ಬ್ಯಾಕ್ಟೀರಿಯಾ ಸಂಗ್ರಹಕ್ಕೆ ಕಾರಣವಾಗುತ್ತವೆ.
ಮುನ್ನೆಚ್ಚರಿಕೆ: ಪ್ರತಿಯೊಂದು ಬಳಕೆಯ ನಂತರ ಬಟ್ಟೆ ಹಾಗೂ ಟವಲ್‌ಗಳನ್ನು ತೊಳೆಯುವುದು ಅವಶ್ಯಕ.

Close-up asian woman with hyperhidrosis sweating. Young asia woman with sweat stain on her clothes against grey background. Healthcare concept. Close-up asian woman with hyperhidrosis sweating. Young asia woman with sweat stain on her clothes against grey background. Healthcare concept. body smell bad stock pictures, royalty-free photos & images

ಹಾರ್ಮೋನ್ ಸಮಸ್ಯೆ ಮತ್ತು ಔಷಧಿ ಪರಿಣಾಮ:
ಹೈಪರ್ಹೈಡ್ರೋಸಿಸ್ (ಅತಿಯಾದ ಬೆವರುವಿಕೆ), ಶಿಲೀಂಧ್ರ ಸೋಂಕುಗಳು ಹಾಗೂ ಕೆಲ ಔಷಧಿಗಳು ದುರ್ವಾಸನೆಗೆ ಕಾರಣವಾಗಬಹುದು.
ಮುನ್ನೆಚ್ಚರಿಕೆ: ಈ ಬಗ್ಗೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯುವುದು ಉತ್ತಮ.

Stream of gas is coming out of deodorant bottle Stream of gas is coming out of deodorant bottle and displaying it. deodorant stock pictures, royalty-free photos & images

ಆಹಾರದ ಆಯ್ಕೆ:
ಬೆಳ್ಳುಳ್ಳಿ, ಈರುಳ್ಳಿ, ಹೆಚ್ಚು ಪ್ರೋಟೀನ್‌ನಿಂದ ಕೂಡಿದ ಆಹಾರಗಳು ಹಾಗೂ ಅತಿಯಾದ ಆಲ್ಕೋಹಾಲ್ ಸೇವನೆಯು ಬೆವರಿನ ಮೂಲಕ ವಿಷಕಾರಿ ವಸ್ತುಗಳ ಬಿಡುಗಡೆಗೆ ಕಾರಣವಾಗಿ ದುರ್ವಾಸನೆ ತರುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ: ಈ ಆಹಾರಗಳನ್ನು ನಿಯಮಿತವಾಗಿ ಅಥವಾ ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ.

50 Foods That Are Super Healthy

ನಿತ್ಯವೂ ಸಾಕಷ್ಟು ನೀರು ಕುಡಿಯುವುದು, ದೇಹವನ್ನು ಒಣವಾಗಿಡುವುದು ಹಾಗೂ ತಾಜಾ ಬಟ್ಟೆ ಧರಿಸುವ ಅಭ್ಯಾಸ ಹೊಂದುವುದು ಉತ್ತಮ. ದೇಹದ ಸ್ವಚ್ಛತೆಯ ಜತೆಗೆ ಆಹಾರ ನಿಯಂತ್ರಣವೂ ದೇಹದ ವಾಸನೆಯನ್ನು ತಡೆಗಟ್ಟಲು ಮುಖ್ಯ ಪಾತ್ರವಹಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!