ವೈವಾಹಿಕ ಜೀವನದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಜಗಳಗಳು ನಡೆಯುವುದು ಸಾಮಾನ್ಯ. ಆದರೆ, ಇವು ನಿರಂತರವಾಗಿ ಮುಂದುವರಿದರೆ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರೋದು ಗ್ಯಾರಂಟಿ. ಕೆಲವೊಮ್ಮೆ ಎಂತಹ ಸಹಜ ವಿಷಯವೂ ಮುಜುಗರಕ್ಕೆ ಕಾರಣವಾಗಬಹುದು. ಈ ರೀತಿಯ ವೈವಾಹಿಕ ಕಲಹಗಳಿಗೆ ಹಲವು ಸಾಮಾನ್ಯ ಕಾರಣಗಳಿವೆ. ಸರಿಯಾದ ಸಂವಹನ, ಪರಸ್ಪರ ಗೌರವ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಜಗಳಗಳನ್ನು ತಪ್ಪಿಸಲು ನೆರವಾಗಬಹುದು.
ನಿರೀಕ್ಷೆಗಳನ್ನು ಪೂರೈಸದಿರುವುದು
ಸಂಬಂಧಗಳಲ್ಲಿ ನಿರೀಕ್ಷೆಗಳು ಸಾಮಾನ್ಯ. ಗಂಡ ಹೆಂಡತಿ ಎರಡೂ ಪರಸ್ಪರರಿಂದ ನಿರ್ದಿಷ್ಟವಾಗಿ ಏನನ್ನಾದರೂ ನಿರೀಕ್ಷಿಸುತ್ತಾರೆ. ಆದರೆ ಆ ನಿರೀಕ್ಷೆಗಳು ಸ್ಪಷ್ಟವಲ್ಲದಿದ್ದರೆ ಅಥವಾ ತಿಳಿವಳಿಕೆಯ ಕೊರತೆ ಇದ್ದರೆ ಅತೃಪ್ತಿ ಉಂಟಾಗಿ ಜಗಳಗಳಿಗೆ ಕಾರಣವಾಗಬಹುದು. ಈ ಕಾರಣದಿಂದ, ಅವರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಸ್ಪರ ಮಾಹಿತಿ ಹಂಚಿಕೊಳ್ಳುವ ಸಂವಹನದ ಅಗತ್ಯವಿದೆ.
ಆರ್ಥಿಕ ಭಿನ್ನಾಭಿಪ್ರಾಯಗಳು
ಹಣಕಾಸು ಸಂಬಂಧಿ ವಿಷಯಗಳು ಬಹುಮಟ್ಟಿಗೆ ವೈವಾಹಿಕ ಕಲಹಗಳಿಗೆ ಕಾರಣವಾಗುತ್ತವೆ. ಖರ್ಚು ಮಾಡಲು ಒಬ್ಬರಿಗೆ ಇಷ್ಟವಾದರೇ, ಇನ್ನೊಬ್ಬರಿಗೆ ಅನಾವಶ್ಯಕವೆನಿಸಬಹುದು. ಹೀಗಾಗಿ, ತಿಂಗಳ ಆದಾಯ, ಖರ್ಚು, ಉಳಿತಾಯದ ಬಗ್ಗೆ ಮುಂಚಿತವಾಗಿ ಚರ್ಚೆ ಮಾಡುವುದು ಒಳ್ಳೆಯದು. ನಂಬಿಕೆಯಿಂದ ನಿರ್ಧಾರಗಳನ್ನು ಹಂಚಿಕೊಳ್ಳುವುದು ಶ್ರೇಷ್ಠ ಮಾರ್ಗ.
ತಪ್ಪು ಸಂವಹನ
ಸಂಬಂಧದಲ್ಲಿ ಸರಿಯಾದ ಸಂವಹನದ ಕೊರತೆ ಇದ್ದರೆ ಜಗಳಗಳು ಹೆಚ್ಚಾಗುತ್ತವೆ. ಅರ್ಥಮಾಡಿಕೊಳ್ಳದೇ ತೀರ್ಮಾನಿಸುವುದು, ಚರ್ಚೆ ಮಾಡದೇ ಸಮಸ್ಯೆಗಳನ್ನು ಮುಚ್ಚಿಟ್ಟಿಡುವುದು ಈ ಸಮಸ್ಯೆಗೆ ಕಾರಣವಾಗಬಹುದು. ಸರಿಯಾದ ರೀತಿಯಲ್ಲಿ ಮಾತನಾಡುವುದು ಉತ್ತಮ ಸಂಬಂಧಕ್ಕೆ ಬುನಾದಿ.
ಅಸಮಾನ ಜವಾಬ್ದಾರಿಗಳು
ಮನೆಯ ಕೆಲಸ, ಮಕ್ಕಳ ಬಗ್ಗೆ ಶ್ರದ್ದೆ ಅಥವಾ ಬೇರೆ ಯಾವುದೇ ಜವಾಬ್ದಾರಿಗಳ ವಿಷಯದಲ್ಲಿ ಏಕರೀತಿ ಹೊರೆ ಯಾವುದಾದರೂ ಒಬ್ಬರ ಮೇಲೆ ಬಿದ್ದರೆ ಅಸಮಾಧಾನ ಉಂಟಾಗುತ್ತದೆ. ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳುವ ಮೂಲಕ ಈ ಸಮಸ್ಯೆ ತಪ್ಪಿಸಬಹುದು.
ಬಗೆಹರಿಯದ ಹಳೆಯ ಸಮಸ್ಯೆಗಳು
ಹಿಂದಿನ ವಿಷಯಗಳನ್ನು ಬಗೆಹರಿಸದೇ ಇಡುವುದು ಮುಂದಿನ ಜಗಳಗಳಿಗೆ ಆಸ್ಪದವಾಗುತ್ತದೆ. ಪ್ರತಿ ಸಮಸ್ಯೆಯನ್ನು ಕಾಲಮಿತಿಯೊಳಗೆ ಬಗೆಹರಿಸಿ,ಕ್ಷಮಿಸುವ ಮನಸ್ಥಿತಿಯೊಂದಿಗೆ ಮುಂದೆ ಸಾಗುವುದು ವೈವಾಹಿಕ ಜೀವನವನ್ನು ಆರ್ದ್ರಗೊಳಿಸುತ್ತದೆ.
ವೈವಾಹಿಕ ಜೀವನದಲ್ಲಿ ಪ್ರಾಮಾಣಿಕತೆ, ಸಂವಹನ, ಸಹನೆ ಹಾಗೂ ಪರಸ್ಪರ ಗೌರವ ಬಹಳ ಮುಖ್ಯ. ಸಮಸ್ಯೆಗಳು ಬಂದಾಗ ಬಚ್ಚಿಡದೆ, ಬಗೆಹರಿಸಲು ಮುಂದಾಗುವ ಮನಸ್ಸು ಇದ್ದರೆ ಸಂಬಂಧ ಹಿತಕರವಾಗಿ ಮುಂದುವರಿಯಬಹುದು.