ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಾದ್ಯಂತ ಇಂದಿನಿಂದ ವರುಣನ ಆರ್ಭಟ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ತುಮಕೂರು, ರಾಮನಗರ, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ.
ಕೋಟಾ, ಬಂಟವಾಳ,ಕದ್ರಾ, ಪುತ್ತೂರು, ಉಡುಪಿ, ಶಕ್ತಿನಗರ, ಆಗುಂಬೆಯಲ್ಲಿ ಹೆಚ್ಚಿನ ಮಳೆಯಾಗಿದೆ. ಕಾರ್ಕಳ, ಮೂಡುಬಿದಿರೆ, ಮಾಣಿ, ಶಿರಾಲಿ, ಸುಳ್ಯ, ಭಾಗಮಂಡಲ, ಶೃಂಗೇರಿ, ಜಯಪುರ, ಕೊಪ್ಪ, ಕಳಸ, ಜೋಯ್ಡಾ, ಬೆಳ್ತಂಗಡಿ, ಧರ್ಮಸ್ಥಳ, ಲೋಂಡಾ, ಅಂಕೋಲಾ, ಹೊನ್ನಾವರ, ಮಂಕಿ, ಬನವಾಸಿ, ಯಲ್ಲಾಪುರ, ಮುಂಡಗೋಡು, ತ್ಯಾಗರ್ತಿ, ಸೋಮವಾರಪೇಟೆ, ಖಾನಾಪುರ, ರಬಕವಿ, ಶಾಹಪುರ, ಸೈದಾಪುರ, ಹರಪನಹಳ್ಳಿ, ಎನ್ಆರ್ಪುರ, ಆನವಟ್ಟಿಯಲ್ಲಿ ಮಳೆಯಾಗಿದೆ.