Weight Loss Tips | ನುಗ್ಗೆಸೊಪ್ಪಿನ ಪುಡಿಯನ್ನು ಈ ರೀತಿಯಾಗಿ ಸೇವಿಸಿದ್ರೆ ಸಾಕು…! ದೇಹದಲ್ಲಿರೋ ಬೊಜ್ಜು ಬೆಣ್ಣೆ ರೀತಿ ಕರಗುತ್ತೆ

ಬಹುಪಾಲು ಜನರು ತೂಕ ಇಳಿಸುವ ಸಲುವಾಗಿ ನಾನಾ ಉಪಾಯಗಳನ್ನು ಪ್ರಯತ್ನಿಸುತ್ತಿರುತ್ತಾರೆ. ಆದರೆ ನೈಸರ್ಗಿಕವಾಗಿ ಮತ್ತು ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸುವುದು ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ ನುಗ್ಗೆ ಸೊಪ್ಪಿನ ಪುಡಿ (Moringa Powder) ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಪೌಷ್ಟಿಕಾಂಶಗಳಿಂದ ತುಂಬಿರುವ ನುಗ್ಗೆ ಸೊಪ್ಪು ಚಯಾಪಚಯವನ್ನು ವೇಗಗೊಳಿಸಿ, ಕೊಬ್ಬಿನ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ಚಹಾದಲ್ಲಿ ನುಗ್ಗೆ ಪುಡಿ ಬೆರೆಸಿ
ಬೆಳಗಿನ ಜಾವಕ್ಕೆ ಬಿಸಿ ನೀರಿನಲ್ಲಿ ಅಥವಾ ಹರ್ಬಲ್ ಚಹಾದಲ್ಲಿ ಒಂದು ಚಮಚ ನುಗ್ಗೆ ಸೊಪ್ಪಿನ ಪುಡಿ ಸೇರಿಸಿ ಕುಡಿಯುವುದು ಅತ್ಯುತ್ತಮ. ಇದು ದೇಹದ ಕ್ಯಾಲೊರಿಗಳನ್ನು ಸುಡುವ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

Matcha tea, Moringa powder and pills on wooden table Nutritional supplements: Matcha tea cup, Moringa powder and pills shot on rustic wooden table. High resolution 42Mp studio digital capture taken with Sony A7rII and Sony FE 90mm f2.8 macro G OSS lens moringa  powder stock pictures, royalty-free photos & images

ಸ್ಮೂಥಿಗೆ ನುಗ್ಗೆ ಸೊಪ್ಪು ಸೇರಿಸಿ
ಹಣ್ಣುಗಳಿಂದ ಸ್ಮೂಥಿ ತಯಾರಿಸಿದಾಗ ಅದಕ್ಕೆ ಒಂದು ಟೀ ಚಮಚ ನುಗ್ಗೆ ಸೊಪ್ಪಿನ ಪುಡಿ ಸೇರಿಸಿದರೆ, ಸ್ಮೂಥಿಯು ಹೆಚ್ಚು ಪೌಷ್ಟಿಕವಾಗುತ್ತದೆ. ಇದರಲ್ಲಿ ಫೈಬರ್ ಹೆಚ್ಚಿರೋದರಿಂದ ಹಸಿವನ್ನು ತಡೆಯಲು ಸಹಾಯವಾಗುತ್ತದೆ. ತೂಕ ಇಳಿಕೆಗೆ ಇದು ಉತ್ತಮ.

video thumbnail

ಉಪಾಹಾರಕ್ಕೆ ಪೌಷ್ಟಿಕ ಸ್ಪರ್ಶ
ಓಟ್ಸ್, ಮೊಸರು ಅಥವಾ ಸ್ಮೂಥಿ ಬೌಲ್ಗಳಿಗೆ ನುಗ್ಗೆ ಸೊಪ್ಪಿನ ಪುಡಿಯನ್ನು ಸೇರಿಸಿದರೆ ಪೌಷ್ಟಿಕಾಂಶಗಳು ಹೆಚ್ಚಾಗುತ್ತವೆ. ಇದರಲ್ಲಿರುವ ವಿಟಮಿನ್‌ಗಳು, ಪ್ರೋಟೀನ್, ಮತ್ತು ಖನಿಜಗಳಂಥ ಅಂಶಗಳು ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸುತ್ತವೆ.

video thumbnail

ಸಲಾಡ್‌ನಲ್ಲಿ ನುಗ್ಗೆ ಪುಡಿ
ಸಲಾಡ್‌ಗಳಿಗೆ ಸೊಪ್ಪಿನ ಪುಡಿ ಅಥವಾ ತಾಜಾ ನುಗ್ಗೆ ಎಲೆಗಳನ್ನು ಸೇರಿಸಿದರೆ ರುಚಿ ಮಾತ್ರವಲ್ಲದೆ ಆರೋಗ್ಯಕ್ಕೂ ಲಾಭವಾಗುತ್ತದೆ. ಇದರಲ್ಲಿ ಇರುವ ಜೀರ್ಣಕ್ರಿಯೆ ಸಹಾಯಕ ಅಂಶಗಳು ತೂಕ ಇಳಿಕೆಗೆ ಪೂರಕವಾಗಿವೆ.

Green moringa leaf powder. Moringa leaf tea. green powder on white background Green moringa leaf powder. Moringa leaf tea. green powder on white background moringa  powder stock pictures, royalty-free photos & images

ನುಗ್ಗೆ ನೀರು:
ಪಾತ್ರೆಯಲ್ಲಿ ನೀರಿಗೆ ನುಗ್ಗೆ ಸೊಪ್ಪಿನ ಪುಡಿಯನ್ನು ಸೇರಿಸಿ ರಾತ್ರಿ ಇಡೀ ನೆನೆಸಿಟ್ಟು, ಬೆಳಗ್ಗೆ ಅದನ್ನು ಕುಡಿದರೆ ದೇಹದ ವಿಷಕಾರಿ ಅಂಶಗಳು ಹೊರಹೋಗುತ್ತವೆ. ಇದು ದೇಹದ ಜೀರ್ಣ ಕ್ರಿಯೆಗೆ ಸಹಕಾರಿಯಾಗುತ್ತದೆ ಹಾಗೂ ಹೊಟ್ಟೆ ಉಬ್ಬುವಿಕೆ ತಗ್ಗಿಸುತ್ತದೆ.

Moringa nutritional plant - Moringa oleifera Moringa nutritional plant - Moringa oleifera moringa  powder stock pictures, royalty-free photos & images

ನುಗ್ಗೆ ಸೊಪ್ಪಿನ ಪುಡಿ ನಿಸ್ಸಂದೇಹವಾಗಿ ತೂಕ ಇಳಿಕೆಗೆ ಸಹಾಯಕವಾದ ಪೌಷ್ಟಿಕ ಪದಾರ್ಥ. ಆದರೆ ಅದನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವ ಮೊದಲು ಆರೋಗ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!