ಖಾರ ಖಾರ, ಬಿಸಿ ಬಿಸಿ ತಿಂಡಿ ತಿನ್ನೋ ಆಸೆ ಸಾಯಂಕಾಲ ಆಗೋವಾಗ ಹೆಚ್ಚಾಗುತ್ತೆ ಅಲ್ವಾ? ಇನ್ನೂ ಮಳೆ ಬಾರೋ ಹೊತ್ತಿಗಂತೂ ಮನೆಯಲ್ಲೇ ಏನಾದ್ರು ಮಾಡಿ ತಿನ್ನೋ ಆಸೆಯಾದಾಗ ಮಸಾಲಾ ಬ್ರೆಡ್ ಒಂದು ಸೂಪರ್ ಆಯ್ಕೆ. ಬ್ರೆಡ್ ಇದ್ದರೆ ಸಾಕು, ಸ್ವಲ್ಪ ಸಾಮಾನು ಸೇರಿಸಿ ತಕ್ಷಣ ತಯಾರಿಸಬಹುದಾದ ಈ ಸ್ಪೈಸಿ ಟೋಸ್ಟ್ ಎಲ್ಲರ ಮನ ಗೆಲ್ಲುತ್ತೆ.
ಬೇಕಾಗುವ ಸಾಮಾಗ್ರಿಗಳು
ಕಡ್ಲೆಹಿಟ್ಟು – ಒಂದೂವರೆ ಕಪ್
ಅಕ್ಕಿಹಿಟ್ಟು – 1 ಕಪ್
ಖಾರದ ಪುಡಿ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು- ಸ್ವಲ್ಪ
ಎಳ್ಳು – 2 ಚಮಚ
ಎಣ್ಣೆ- ಕರಿಯಲು
ಬ್ರೆಡ್ ಸ್ಲೈಸ್ – 6
ಮಾಡುವ ವಿಧಾನ:
ಒಂದು ದೊಡ್ಡ ಬೌಲ್‌ನಲ್ಲಿ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಎಳ್ಳು, 2 ಚಮಚ ಎಣ್ಣೆ ಮತ್ತು ಬೇಕಾದಷ್ಟು ನೀರನ್ನು ಹಾಕಿ ಬೊಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಹಿಟ್ಟು ಹೆಚ್ಚು ತೆಳುವಾಗದಂತೆ, ಸ್ವಲ್ಪ ಗಟ್ಟಿಯಾಗಿ ಇರಲಿ.
ಈ ಹಿಟ್ಟನ್ನು ಬ್ರೆಡ್‌ನ ಎರಡೂ ಬದಿಗೆ ಸಮವಾಗಿ ಹಚ್ಚಿ, ಬಳಿಕ ಬಿಸಿಯಾದ ಎಣ್ಣೆಯಲ್ಲಿ ಕರಿದರೆ ಮಸಾಲಾ ಬ್ರೆಡ್ ರೆಡಿ.