ಇಂದೋರ್ ಮತ್ತೆ ದೇಶದ ಟಾಪ್ ಸ್ವಚ್ಛ ನಗರ: ಮೈಸೂರಿಗೆ ಎಷ್ಟನೇ ಸ್ಥಾನ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮತ್ತೊಮ್ಮೆ ಸ್ವಚ್ಛ ನಗರವಾಗಿ ಇಂದೋರ್ ನಗರ ಸತತವಾಗಿ ಎಂಟನೇ ಬಾರಿ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛಾ ಸರ್ವೇಕ್ಷಣಾ 2024-25ನೇ ಸಾಲಿನ ಸಮೀಕ್ಷೆಯಲ್ಲಿ ಇಂದೋರ್ ದೇಶದ ನಂಬರ್ ಒನ್ ಕ್ಲೀನ್ ಸಿಟಿ ಅವಾರ್ಡ್ ಪಡೆದಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಹಿಂದೆ ಒಂದು ವರ್ಷ ಮಾತ್ರ ಕರ್ನಾಟಕದ ಮೈಸೂರು ನಗರವು ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿತ್ತು.

ಇಂದೋರ್ ಬಳಿಕ ಸೂರತ್ ಮತ್ತು ನವೀ ಮುಂಬೈ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಇನ್ನೂ 3- 10 ಲಕ್ಷ ಜನಸಂಖ್ಯೆಯ ನಗರಗಳ ಕೆಟಗರಿಯಲ್ಲಿ ನೋಯ್ಡಾ ದೇಶದ ನಂಬರ್ ಒನ್ ಕ್ಲೀನ್ ಸಿಟಿಯಾಗಿ ಆಯ್ಕೆಯಾಗಿದೆ. ಈ ಕೆಟಗರಿಯಲ್ಲಿ ಚಂಢೀಗಡ ಎರಡನೇ ಸ್ಥಾನ ಪಡೆದರೆ, ಮೈಸೂರು ಮೂರನೇ ಸ್ಥಾನ ಪಡೆದಿದೆ.

‘ಸ್ವಚ್ಛ ಸರ್ವೇಕ್ಷಣ್’ ಮಿಷನ್‌ ಯೋಜನೆಯಡಿಯಲ್ಲಿ ಸಾರ್ವಜನಿಕರನ್ನು ಜೊತೆ ಪಟ್ಟಣ, ನಗರಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿರಲಾಗುತ್ತದೆ. ಸಮಾಜದ ಎಲ್ಲಾ ವರ್ಗಗಳಲ್ಲಿ ನಾವು ವಾಸಿಸುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತದೆ. ಕಳೆದ 9 ವರ್ಷಗಳಿಂದ ‘ಸ್ವಚ್ಛ ಸರ್ವೇಕ್ಷಣ್’ ಮಿಷನ್‌ ಅಡಿಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿಕೊಂಡು ಬರಲಾಗುತ್ತಿದೆ.

ಕೇಂದ್ರದ ಪ್ರಕಾರ ಸ್ವಚ್ಛ ಸರ್ವೇಕ್ಷಣ 2024-25 54 ಸೂಚಕಗಳೊಂದಿಗೆ 10 ಉತ್ತಮವಾಗಿ ವ್ಯಾಖ್ಯಾನಿಸಲಾದ ನಿಯತಾಂಕಗಳನ್ನು ಬಳಸಿಕೊಂಡು “ನಗರ ಸ್ವಚ್ಛತೆಯನ್ನು ನಿರ್ಣಯಿಸಲು ಸ್ಮಾರ್ಟ್, ರಚನಾತ್ಮಕ ವಿಧಾನ” ಮತ್ತು ಸೇವಾ ವಿತರಣೆಯನ್ನು ಅಳವಡಿಸಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!