ಅಹಮದಾಬಾದ್ ವಿಮಾನ ಪತನದ ಕುರಿತು ವರದಿ ಪ್ರಸಾರ: ಅಮೆರಿಕ ಮಾಧ್ಯಮಗಳ ವಿರುದ್ಧ ಭಾರತ ಟೀಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನವಾಗಿ 241 ಜನರು ಮೃತಪಟ್ಟು, ಓರ್ವ ಪ್ರಯಾಣಿಕ ಮಾತ್ರ ಪಾರಾಗಿದ್ದರು. ಆದ್ರೆ ಇತ್ತ ತನಿಖೆ ನಡೆಯುತ್ತಿರುವ ಸಮಯದಲ್ಲಿ ವಿದೇಶಿ ಮಾಧ್ಯಮಗಳು ಇಲ್ಲ ಸಲ್ಲದ ವರದಿ ಪ್ರಕಟಿಸುತ್ತಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಇಂದು “ಬೇಜವಾಬ್ದಾರಿಯುತ” ವರದಿ ಮಾಡಿದ್ದಕ್ಕಾಗಿ ವಿದೇಶಿ ಮಾಧ್ಯಮಗಳನ್ನು ಟೀಕಿಸಿದೆ ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಕಾಯುವಂತೆ ಅವರಿಗೆ ಮನವಿ ಮಾಡಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನೀಡಿದ ಹೇಳಿಕೆಯಲ್ಲಿ, ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಆಯ್ದ ಮತ್ತು ಪರಿಶೀಲಿಸದ ವರದಿಗಳ ಮೂಲಕ ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಆರೋಪಿಸಿದೆ. ತನಿಖೆ ಇನ್ನೂ ನಡೆಯುತ್ತಿರುವಾಗ ಅಂತಹ ಹೇಳಿಕೆಗಳನ್ನು ಬೇಜವಾಬ್ದಾರಿ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

ಅಮೆರಿಕ ಮೂಲದ ದಿ ವಾಲ್ ಸ್ಟ್ರೀಟ್ ಜರ್ನಲ್ ಅನ್ನು 260 ಜನರನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಫ್ಲೈಟ್ 171 ಅಪಘಾತದಲ್ಲಿ “ಪೈಲಟ್‌ಗಳ ಪಾತ್ರ” ಇದೆ ಎಂದು ತನ್ನ ಮಾಧ್ಯಮ ವರದಿಯನ್ನು ಮಾಡಿತ್ತು. ಇದನ್ನು ಪರಿಶೀಲಿಸದ, ಬೇಜವಾಬ್ದಾರಿಯುತ ವರದಿ ಎಂದು ಭಾರತ ಟೀಕಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!