ದಿನಭವಿಷ್ಯ: ಕೆಲಸ ಅಂದಮೇಲೆ ಒತ್ತಡ ಇರೋದಿಲ್ವಾ? ಸ್ವಲ್ಪ ಸಹಿಸಿಕೊಂಡ್ರೆ ದಿನ ಅತ್ಯುತ್ತಮವಾಗಿರಲಿದೆ

ಮೇಷ
ನಿಮಗೆ ಪ್ರತಿಕೂಲ ಸನ್ನಿವೇಶ ಉಂಟಾದರೂ ಸಹನೆಯಿಂದ ವರ್ತಿಸಿ. ಭಾವಾವೇಶಗೊಳ್ಳದಿರಿ. ನಿಮ್ಮ ನಿಲುವು ಬದಲಿಸಬೇಕಾದೀತು.
ವೃಷಭ
ಒತ್ತಡದ ದಿನ. ಕಾರ್ಯಸಾಧನೆ ಕಷ್ಟ. ತಲೆನೋವು ಕಾಡೀತು. ಕೌಟುಂಬಿಕ ಪರಿಸರದಲ್ಲಿ ಸಮಾಧಾನ.  ಧ್ಯಾನ ಸಹಕಾರಿಯಾದೀತು.
ಮಿಥುನ
ಅಸಹನೀಯ ಸನ್ನಿವೇಶ ಎದುರಿಸುವಿರಿ. ಪರಿಸ್ಥಿತಿ ಪ್ರತಿಕೂಲ. ಗುರಿ ಸಾಽಸಲು ಕಠಿಣ ಶ್ರಮ ಅವಶ್ಯ. ಪ್ರಯಾಣದಲ್ಲಿ ಅನನುಕೂಲ.
ಕಟಕ
ಆಸ್ತಿ ಅಥವಾ ಮನೆ ಖರೀದಿಯ ಉದ್ದೇಶ ಸಫಲತೆ ಕಾಣಲಿದೆ. ದಂಪತಿ ಮಧ್ಯೆ ಕಲಹ ಸಂಭವ. ಇಬ್ಬರೂ ಸಹನೆ ಕಾಯುವುದು ಅವಶ್ಯ.
ಸಿಂಹ
ಉಪಯುಕ್ತ ಉದ್ದೇಶಕ್ಕೆ ಹಣವನ್ನು ಬಳಸಿರಿ. ಅಪವ್ಯಯ ತಪ್ಪಿಸಿ. ಕೆಲವು ಕಾರ್ಯಕ್ಕೆ ಮನೆಯವರ ವಿರೋಧ ಎದುರಾದೀತು.
ಕನ್ಯಾ
ಎಂದಿಗಿಂತ ಹೆಚ್ಚು ಹೊಣೆ. ಅಸಹನೆ. ಮಾತಿನ ಮೇಲೆ ನಿಯಂತ್ರಣವೂ ಅವಶ್ಯ. ತಪ್ಪು ಮಾತು ಜಗಳಕ್ಕೆ ಕಾರಣ ಆದೀತು.   ಶೀತಬಾಧೆ ಕಾಡಬಹುದು.
ತುಲಾ
ನಿರಾಳ ಮನಸ್ಥಿತಿ. ಜಂಜಡಗಳೆಲ್ಲ ಕಳೆದ ಭಾವ. ಕೌಟುಂಬಿಕವಾಗಿ ಹಲವಾರು ಕೆಲಸ ನಿಮ್ಮ ಮೇಲಿದೆ. ಅತ್ತ ಹೆಚ್ಚು ಗಮನ ಕೊಡಿ.
ವೃಶ್ಚಿಕ
ಕೆಲವರ ಜತೆ ತಪ್ಪಭಿಪ್ರಾಯ ಉಂಟಾದೀತು. ಅದನ್ನು ಬೇಗನೆ ಶಮನಗೊಳಿಸಿ. ದೊಡ್ಡ ಖರ್ಚಿನ ಚಿಂತೆ ಬಾಧಿಸುವುದು.
ಧನು
ಫಲಪ್ರದ ದಿನ. ಸಂತಾನ ಭಾಗ್ಯಕ್ಕೆ ಸಂಬಂಽಸಿ  ಶುಭಕರ ಬೆಳವಣಿಗೆ. ಆಪ್ತರ ಜತೆಗಿನ ಮುನಿಸು ಶಮನ. ಸೌಹಾರ್ದ ವಾತಾವರಣ.
ಮಕರ
ಸಹೋದ್ಯೋಗಿಗಳ ಮಾತು ಮನಸ್ಸು ಚುಚ್ಚಬಹುದು. ಸಹನೆ ಕಳಕೊಳ್ಳದಿರಿ. ನಿಮ್ಮ ಹೊಣೆ ಸರಿಯಾಗಿ ನಿಭಾಯಿಸಿ.
ಕುಂಭ
ವೃತ್ತಿಯಲ್ಲಿ ಶುಭಫಲ. ಆದರೆ ಕುಟುಂಬದಲ್ಲಿ ಅಪಸ್ವರ. ಎರಡನ್ನೂ ಸರಿಯಾಗಿ ನಿಭಾಯಿಸುವ ಕಲೆ ಅರಿತುಕೊಳ್ಳಿ.
ಮೀನ
ವಾಗ್ವಾದದಲ್ಲಿ ಪಾಲ್ಗೊಳ್ಳುವ ಪ್ರಸಂಗ ಬಂದೀತು. ಅದರಿಂದ ದೂರವಿರಿ. ಸಂಗಾತಿಗೆ ಜತೆಗೆ ಆತ್ಮೀಯತೆ ಕಾಯ್ದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!