ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಮೆಟಾ’ ವೇದಿಕೆಗಳಲ್ಲಿ ಕನ್ನಡ ಸ್ವಯಂ ಅನುವಾದದ ವೇಳೆ ಭಾರೀ ಲೋಪ ಹಾಗೂ ನೈಜ ಅರ್ಥವೇ ನಾಶವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ಮಾತೃ ಸಂಸ್ಥೆ ಮೆಟಾ ಕ್ಷಮೆಯಾಚಿಸಿದೆ.
ಅನುವಾದದಲ್ಲಿ ಕೆಲಕಾಲ ದೋಷ ಕಂಡುಬರಲು ಕಾರಣವಾಗಿದ್ದ ಅಂಶಗಳನ್ನು ನಾವು ಸರಿಪಡಿಸಿದ್ದೇವೆ. ಇಂಥ ಘಟನೆ ನಡೆದಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಮೆಟಾ ಹೇಳಿದೆ.
ಮೆಟಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅನುವಾದ ದೋಷದ ಬಗ್ಗೆ ಸಿಎಂ ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, ಕನ್ನಡದ ವಿಷಯಗಳ ದೋಷಪೂರಿತ ಅನುವಾದವು ಸತ್ಯಾಂಶಗಳನ್ನೇ ನಾಶಪಡುತ್ತಿದೆ. ಈ ವೇದಿಕೆಯ ಬಳಕೆದಾರರನ್ನು ತಪ್ಪುಗ್ರಹಿಕೆಗೆ ಕಾರಣವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾಗಲಿದೆ ಎಂದು ಅಸಮಾಧಾನ ಹೊರಹಾಕಿದ್ದರು.