ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ವಾರಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಮಾನಸಿಕವಾಗಿ ನೊಂದಿದ್ದು, ಸಮಾಜವನ್ನು ಎದುರಿಸಲಾಗದೆ ನೇಣಿಗೆ ಕೊರಳೊಡ್ಡಿದ್ದಾಳೆ.
ಉತ್ತರಪ್ರದೇಶದಲ್ಲಿ ಘಟನೆ ನಡೆದಿದೆ. ಬಾಲಕಿ ಅತ್ಯಾಚಾರದ ನಂತರ ತನ್ನ ತಾಯಿಯ ಬಳಿ ಮಾಹಿತಿ ನೀಡಿದ್ದಾಳೆ. ತಾಯಿ ಕಂಪ್ಲೆಂಟ್ ಮಾಡಿದ್ದು, ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಅಕ್ಕಪಕ್ಕದ ಮನೆಯವರೆಲ್ಲರಿಗೂ ಅತ್ಯಾಚಾರದ ಬಗ್ಗೆ ತಿಳಿದಿತ್ತು. ಇದರಿಂದ ಬಾಲಕಿ ಮನನೊಂದಿದ್ದಳು. ಸಮಾಜವನ್ನು ಎದುರಿಸುವ ಭಯ ಆಕೆಗೆ ಬಂದಿತ್ತು.
ಮನೆಯಲ್ಲಿ ತನ್ನ ಮೂರು ವರ್ಷದ ತಮ್ಮನಿದ್ದ ವೇಳೆಯೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮ್ಮ ಹಾಲ್ನಲ್ಲಿ ಆಟ ಆಡುತ್ತಿದ್ದ ವೇಳೆ ಆಕೆ ರೂಮ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಡೀ ಕುಟುಂಬ ಆಘಾತದಲ್ಲಿದೆ.
ಈ ಘಟನೆ ನಡೆದಾಗಿನಿಂದ ಆಕೆ ಮಾನಸಿಕ ಒತ್ತಡದಲ್ಲಿದ್ದಳು, ಮನೆಯೊಳಗೇ ಇರುತ್ತಿದ್ದಳು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ.