SHOCKING | ಮುಂಬೈಯ ಬಾಂದ್ರಾದಲ್ಲಿ ಮೂರು ಅಂತಸ್ತಿನ ವಠಾರ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಾಣಿಜ್ಯ ನಗರ ಮುಂಬೈಯ ಪಶ್ಚಿಮ ಉಪನಗರ ಬಾಂದ್ರಾದಲ್ಲಿ ಮೂರು ಅಂತಸ್ತಿನ ವಠಾರ ಕುಸಿದಿದ್ದು, ಕನಿಷ್ಠ 10 ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ ಏಳು ಜನರನ್ನು ಅವಶೇಷಗಳಿಂದ ರಕ್ಷಿಸಿ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಂದ್ರಾ ಪೂರ್ವದ ಭಾರತ್ ನಗರ ಪ್ರದೇಶದ ವಠಾರ ಸಂಖ್ಯೆ 37 ಬೆಳಗ್ಗೆ 5.56 ರ ಸುಮಾರಿಗೆ ಕುಸಿದಿದೆ. ಎಂಟು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ, ಮುಂಬೈ ಪೊಲೀಸ್ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆ ಸ್ಥಳೀಯ ವಾರ್ಡ್ ಯಂತ್ರೋಪಕರಣಗಳ ತಂಡಗಳೊಂದಿಗೆ ಸ್ಥಳದಲ್ಲಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!