ದೇಶದ ‘ಸ್ವಚ್ಛ ನಗರ’ ಪಟ್ಟಿಯಲ್ಲಿ ಸತತ 8ನೇ ವರ್ಷ ಇಂದೋರ್ ನಂ.1: ಮೈಸೂರಿಗೆ ಯಾವ ಸ್ಥಾನ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದ ಮೈಸೂರು 3ನೇ ಸ್ಥಾನದಲ್ಲಿದೆ.

Indore ranked cleanest city 4th year in a row - The Hindu10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಧ್ಯಪ್ರದೇಶದ ಇಂದೋರ್‌ ನಗರವು ದೇಶದಲ್ಲೇ ಅತ್ಯಂತ ಸ್ವಚ್ಛ ನಗರ(ಸೂಪರ್‌ ಸ್ವಚ್ಛ್‌ ಲೀಗ್‌) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಸ್ವಚ್ಛ ನಗರವೆಂಬ ಮುಕುಟ ಇಂದೋರ್‌ ನಗರದ ಪಾಲಾಗುತ್ತಿರುವುದು ಇದು ಸತತ ಎಂಟನೇ ಬಾರಿ. ಇನ್ನು 3ರಿಂದ 10 ಲಕ್ಷ ಜನಸಂಖ್ಯೆಯ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮೈಸೂರು ಮೂರನೇ ಸ್ಥಾನಕ್ಕೆ ಭಾಜನವಾಗಿದ್ದರೆ, ರಾಜ್ಯಗಳ ಭರವಸೆಯ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ದಾವಣಗೆರೆ 15ನೇ ಸ್ಥಾನ ಪಡೆದಿದೆ.

I've seen people stop their cars to pick up litter': how one city cleaned  up its streets | Waste | The Guardianಗುರುವಾರ ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಘೋಷಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸೂಪರ್ ಸ್ವಚ್ಛ ಲೀಗ್ ನಗರಗಳಲ್ಲಿ’ ಇಂದೋರ್ ಅನ್ನು ಅತ್ಯಂತ ಸ್ವಚ್ಛ ನಗರವೆಂದು ಘೋಷಿಸಿದರು

ಇಂದೋರ್‌ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸಗಢದ ಅಂಬಿಕಾಪುರ 2 ಹಾಗೂ ಕರ್ನಾಟಕದ ಮೈಸೂರು 3 ಸ್ಥಾನ ಪಡೆದುಕೊಂಡಿವೆ. ಹತ್ತು ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಸ್ವಚ್ಛ ನಗರವಾಗಿ ಗುಜರಾತ್‌ನ ಅಹಮದಾಬಾದ್‌ ಹೊರಹೊಮ್ಮಿದೆ. ಛತ್ತೀಸಗಢದ ರಾಯ್ಪುರ, ಮಹಾರಾಷ್ಟ್ರದ ನವಿ ಮುಂಬೈ, ಮಧ್ಯಪ್ರದೇಶದ ಜಬಲ್ಪುರ, ಗುಜರಾತ್‌ನ ಸೂರತ್‌ ನಂತರದ ಸ್ಥಾನದಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!