ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ನಗರದ ಕೆ.ಆರ್ ನಗರ ಮಹಿಳೆಯ ಪ್ರಕರಣದಲ್ಲಿ ವಾದ ಮಂಡನೆ ಪೂರ್ಣವಾಗಿದೆ. ಪ್ರಾಜಿಕ್ಯೂಷನ್ ಎಸ್ಪಿಪಿ ಬಿಎ ಜಗದೀಶ್ ಮತ್ತು ಅಶೋಕ್ ನಾಯಕ್ ವಾದ ಪೂರ್ಣಗೊಂಡಿದೆ. ಪ್ರಜ್ವಲ್ ಪರ ಹಿರಿಯ ವಕೀಲ ನಳಿನ ಮಾಯಗೌಡ ವಾದ ಸಹ ಅಂತ್ಯವಾಗಿದೆ.
ವಾದ ಪ್ರತಿವಾದ ಆಲಿಸಿದ ಜಡ್ಜ್ ಸಂತೋಷ ಗಜಾನನ ಭಟ್ ಆದೇಶವನ್ನು ಕಾಯ್ದಿರಿಸಿದ್ದಾರೆ. ಜುಲೈ 30ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣ ಕುರಿತು ತೀರ್ಪು ಪ್ರಕಟಿಸಲಿದೆ.
ಜುಲೈ 30 ರಂದು ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರವಾಗಲಿದೆ. ಅಕಸ್ಮಾತ್ ದೋಷಿ ಎಂದು ಸಾಬೀತಾದರೆ, ಪ್ರಜ್ವಲ್ ರೇವಣ್ಣ ಕನಿಷ್ಠ 10 ವರ್ಷ ಗರಿಷ್ಠ ಜೀವಾವಧಿ ಶಿಕ್ಷೆಗೆ ಒಳಗಾಗಲಿದ್ದಾರೆ.