ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಪತ್ನಿ ಮಿಚೆಲ್ ಒಬಾಮಾ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರು ಡಿವೋರ್ಸ್ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಆದ್ರೆ ಇದೀಗ ಇವುಗಳಿಗೆಲ್ಲಾ ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ಇಬ್ಬರೂ ತೆರೆ ಎಳೆದಿದ್ದಾರೆ.
ನಮ್ಮ ಮಧ್ಯೆ ಡಿವೋರ್ಸ್ ತೆಗೆದುಕೊಳ್ಳುವ ಯಾವುದೇ ಆಲೋಚನೆಯೇ ಬಂದಿಲ್ಲ. ನನ್ನ ಗಂಡನನ್ನು ಬಿಟ್ಟುಬಿಡುವ ಬಗ್ಗೆ ಒಂದು ಕ್ಷಣವೂ ಯೋಚಿಸಿಲ್ಲ ಎಂದು ಮಿಚೆಲ್ ಒಬಾಮಾ ಹೇಳಿದ್ದಾರೆ.
ಕ್ರೇಗ್ ರಾಬಿನ್ಸನ್ ಜೊತೆ ನಡೆಸಿದ ಮಾತುಕತೆಯಲ್ಲಿ ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ಇಬ್ಬರೂ ಜೊತೆಯಾಗಿ ಭಾಗವಹಿಸಿ ಮಾತನಾಡಿದ್ದಾರೆ. ಜೊತೆಗೆ ಡಿವೋರ್ಸ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.
“ನಾನು ನನ್ನ ಗಂಡನನ್ನು ಬಿಟ್ಟುಬಿಡುವ ಬಗ್ಗೆ ಯೋಚಿಸಿದ ಒಂದು ಕ್ಷಣವೂ ಇರಲಿಲ್ಲ. ನಾವು ನಿಜವಾಗಿಯೂ ಕೆಲವು ಕಠಿಣ ಸಮಯಗಳನ್ನು ಎದುರಿಸಿದ್ದೇವೆ. ನಾವು ಬಹಳಷ್ಟು ಮೋಜು, ತಮಾಷೆಯ ಕ್ಷಣಗಳನ್ನು, ಬಹಳಷ್ಟು ಸಾಹಸಗಳನ್ನು ಜೀವನದಲ್ಲಿ ಎದುರಿಸಿದ್ದೇವೆ. ನಾನು ಮದುವೆಯಾದ ವ್ಯಕ್ತಿಯಿಂದಾಗಿ ನಾನು ಉತ್ತಮ ವ್ಯಕ್ತಿಯಾಗಿದ್ದೇನೆ” ಎಂದು ಹೇಳುವ ಮೂಲಕ ಮಿಚೆಲ್ ಒಬಾಮಾ, ಡಿವೋರ್ಸ್ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
ಟ್ರಂಪ್ ಅಧಿಕಾರ ಸ್ವೀಕಾರ ಮತ್ತು ಜಿಮ್ಮಿ ಕಾರ್ಟರ್ ಅವರ ಅಂತ್ಯಕ್ರಿಯೆ ಸೇರಿದಂತೆ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಿಚೆಲ್ ಒಬಾಮಾ ಭಾಗವಹಿಸದೇ ಇದ್ದಿದ್ದರಿಂದ ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ನಡುವೆ ಡಿವೋರ್ಸ್ ಆಗುತ್ತಿದೆ ಎಂಬ ವದಂತಿಗಳು ಹುಟ್ಟಿಕೊಂಡಿದ್ದವು.
ಬರಾಕ್ ಒಬಾಮಾ ಮತ್ತು ಮಿಚೆಲ್ ಒಬಾಮಾ ಇಬ್ಬರೂ 1992ರಲ್ಲಿ ವಿವಾಹವಾಗಿದ್ದಾರೆ. ಈ ದಂಪತಿಗೆ ಮಲಿಹಾ ಮತ್ತು ಸಾಸ್ ಎಂಬ ಇಬ್ಬರು ಹೆಣ್ಮಕ್ಕಳಿದ್ದಾರೆ.