ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿ ಮತ್ತು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಭ್ರಷ್ಟಾಚಾರ ಮಾಡಿರುವ ನಿಮ್ಮನ್ನ ಜೈಲಿಗೆ ಹಾಕಬೇಕು ಎಂದಿದ್ದ ರಾಹುಲ್ ಹೇಳಿಕೆಗೆ ಶರ್ಮಾ ಕೆಂಡಾಮಂಡಲರಾಗಿದ್ದಾರೆ.
ನಿಮ್ಮ ಹಾಗೆ ಬಾಟೆಲ್ ಹಾಲು ಕುಡಿದು ಬೆಳೆದವನಲ್ಲ. ತಾಯಿ ಎದೆಹಾಲು ಕುಡಿದ ಮಗ ನಾನು. ಪೈಕಾನ್ ಮೀಸಲು ಅರಣ್ಯದಲ್ಲಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಗೆ ರಾಹುಲ್ ಗಾಂಧಿ ದ್ವೇಷಭಾಷಣ ಕಾರಣ. ರಾಹುಲ್, ಖರ್ಗೆ ಅಸ್ಸಾಂಗೆ ಭೇಟಿ ನೀಡಿದ ವೇಳೆ ಮಾಡಿರುವ ಭಾಷಣಗಳನ್ನು ಅಧಿಕಾರಿಗಳು ಪರಿಶೀಲಿಸ್ತಿದ್ದಾರೆ. ಸಾಕ್ಷ್ಯಾಧಾರ ಸಿಕ್ಕರೆ ನಿಮ್ಮನ್ನ ಜೈಲಿಗಟ್ಟುತ್ತೇನೆ ಅಂತ ಗುಡುಗಿದ್ದಾರೆ.
ರಾಬರ್ಟ್ ವಾದ್ರಾ ಭೂ ಅವ್ಯವಹಾರ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್‌ಶೀಟ್‌ಗೆ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.