ಅಸ್ಸಾಂನ ಗುವಾಹಟಿ ನಗರವು ಸಾಂಸ್ಕೃತಿಕ ಶ್ರೇಷ್ಠತೆಯ ಜೊತೆಗೆ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಬ್ರಹ್ಮಪುತ್ರ ನದಿ, ನೀಲಾಚಲ ಬೆಟ್ಟಗಳು ಹಾಗೂ ಡೀಪೋರ್ ಬೀಲ್ ಪ್ರದೇಶಗಳಲ್ಲಿ ಹಲವು ರೀತಿಯ ಔಟ್‌ಡೋರ್ ಚಟುವಟಿಕೆಗಳನ್ನು ನಾವು ಟ್ರೈ ಮಾಡಬಹುದು.
ಬ್ರಹ್ಮಪುತ್ರ ನದಿಯಲ್ಲಿ ರಿವರ್ ರಾಫ್ಟಿಂಗ್:
ವಿಶ್ವದ ಪ್ರಮುಖ ನದಿಗಳಲ್ಲಿ ಒಂದಾದ ಬ್ರಹ್ಮಪುತ್ರ ನದಿ ರಾಫ್ಟಿಂಗ್ ಸಾಹಸಕ್ಕೆ ಹೆಸರಾಗಿದೆ. ಈ ನದಿಯಲ್ಲಿ ವೈಟ್ ವಾಟರ್ ರಾಫ್ಟಿಂಗ್ ಮಾಡುವುದು ಪ್ರವಾಸಿಗರಿಗೆ ಉತ್ಸಾಹದ ಅನುಭವ ನೀಡುತ್ತದೆ. ಮಳೆಗಾಲದಲ್ಲಿ ನದಿಯ ವೇಗ ಹೆಚ್ಚಿದ್ದು, ಜೋರಾಗಿ ಹರಿಯುವ ನೀರಿನಲ್ಲಿ ಸವಾಲುಗಳನ್ನು ಎದುರಿಸುವುದು ಸಾಹಸಿಗಳಿಗೆ ರೋಚಕ.
ಗುವಾಹಟಿಯಲ್ಲಿ ಜಿಪ್‌ಲೈನಿಂಗ್:
ನಗರದ ಆಕಾಶ ನೋಟಗಳನ್ನು ಪಕ್ಕಾ ಎಂಜಾಯ್ ಮಾಡಬೇಕೆಂದರೆ, ಜಿಪ್‌ಲೈನಿಂಗ್ ಅತ್ಯುತ್ತಮ ಆಯ್ಕೆ. ಈ ಚಟುವಟಿಕೆ ರೆಸಾರ್ಟ್‌ಗಳು ಮತ್ತು ಸಾಹಸ ಉದ್ಯಾನವನಗಳಲ್ಲಿ ಲಭ್ಯವಿದೆ.
ಡೀಪೋರ್ ಬೀಲ್ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಕಯಾಕಿಂಗ್:
ಪಕ್ಷಿ ವೀಕ್ಷಕರಿಗೆ ಮತ್ತು ಪ್ರಕೃತಿಪ್ರಿಯರಿಗೆ ಅತ್ಯುತ್ತಮ ಸ್ಥಳವಾದ ಡೀಪೋರ್ ಬೀಲ್‌ನಲ್ಲಿ ಕಯಾಕಿಂಗ್ ಮೂಲಕ ಶಾಂತ ಸರೋವರದ ಮಜಾ ಸವಿಯಬಹುದು. ವಲಸೆ ಹಕ್ಕಿಗಳ ದರ್ಶನ ಕೂಡ ಇಲ್ಲಿ ಸಿಗುತ್ತದೆ, ವಿಶೇಷವಾಗಿ ಸೈಬೀರಿಯನ್ ಕ್ರೇನ್ ಹಕ್ಕಿಯು ಮುಖ್ಯ ಆಕರ್ಷಣೆಯಾಗಿದೆ.
ನೀಲಾಚಲ ಬೆಟ್ಟಗಳಲ್ಲಿ ರಾಕ್ ಕ್ಲೈಂಬಿಂಗ್:
ನೀಲಾಚಲ ಬೆಟ್ಟಗಳಲ್ಲಿ ಹತ್ತುವುದು ಟ್ರೆಕ್ಕರ್‌ಗಳಿಗೆ ಉತ್ತಮ ಅವಕಾಶ. ಈ ಚಟುವಟಿಕೆಯಲ್ಲಿ ಅನುಭವಿ ಮಾರ್ಗದರ್ಶಕರೊಂದಿಗೆ ಸೌಂದರ್ಯಭರಿತ ನೋಟಗಳನ್ನು ವೀಕ್ಷಿಸಿ ಬಗೆಬಗೆಯ ಸವಾಲುಗಳನ್ನು ಎದುರಿಸಲು ಸಾಧ್ಯ. ಇದರೊಂದಿಗೆ ಗುವಾಹಟಿ ನಗರದ ವಿಸ್ತಾರ ಮತ್ತು ಬ್ರಹ್ಮಪುತ್ರ ನದಿಯ ಭವ್ಯ ನೋಟವೂ ಸಿಗುತ್ತದೆ.