ಹೊಸದಿಗಂತ ವರದಿ ವಿಜಯಪುರ:
20 ಸಾವಿರ ರೂ.ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಸರಪಳಿಯಿಂದ ಕಟ್ಟಿ ಹಾಕಿದ ಅರೋಪಿಗಳಿಬ್ಬರನ್ನು ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚಡಚಣದ ಕುಮಾರ್ ಉರ್ಫ್ ಅರ್ಜುನ ಸಿದ್ಗೊಂಡ ಬಿರಾದಾರ, ಉಮ್ರಾಣಿಯ ಶ್ರೀಶೈಲ ಗಿರಿಯಪ್ಪ ಪಿರಗೊಂಡ ಬಂಧಿತ ಆರೋಪಿಗಳು.
ಈ ಆರೋಪಿಗಳು ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಭಾಷಾಸಾಬ್ ಅಲ್ಲಾವುದ್ದೀನ್ ಮುಲ್ಲಾ ಎಂಬನ ಕಾಲಿಗೆ ಸರಪಳಿಯಿಂದ ಕಟ್ಟಿ ಹಾಕಿ, ಅಮಾನವೀಯತೆ ತೋರಿದ್ದರು.
ಡ್ರೈವಿಂಗ್ ಕೆಲಸಕ್ಕೆ ಬರುತ್ತೇನೆ ಎಂದು ಭಾಷಾಸಾಬ್ ಮುಲ್ಲಾ 20 ಸಾವಿರ ಸಾಲ ಪಡೆದಿದ್ದ, ಹಣ ವಾಪಸ್ ಕೊಡದೆ ಇರೋದಕ್ಕೆ ಸರಪಳಿಯಿಂದ ಕಟ್ಟಿ ಹಾಕಿದ್ದಾರೆ.
ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.