ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಪ್ರಸ್ತುತ ಥಾಯ್ಲೆಂಡ್ನಲ್ಲಿ ನಡೆಯುತ್ತಿದೆ. ಕೊನೆಯ ಹಂತದ ಚಿತ್ರೀಕರಣ ನಡೆಯುವಾಗಲೇ ಸಿನಿಮಾದ ಟೀಸರ್ ಬಿಡುಗಡೆ ಬಗ್ಗೆ ಸುದ್ದಿ ಹರಿದಾಡಿತ್ತು. ಇದೀಗ ‘ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ.
‘ಡೆವಿಲ್’ ಸಿನಿಮಾದ ಮೋಷನ್ ಪೋಸ್ಟರ್ ಅತ್ತಿಬೆಲೆಯಲ್ಲಿ ಇಂದು ಬಿಡುಗಡೆ ಆಗಿದೆ. ಮೋಷನ್ ಪೋಸ್ಟರ್ನಲ್ಲಿ ದರ್ಶನ್ ಅವರ ಎರಡು ಚಿತ್ರಗಳನ್ನು ಮಾತ್ರವೇ ತೋರಿಸಲಾಗಿದೆ. ಅದರ ಹೊರತಾಗಿ ಮೋಷನ್ ಪೋಸ್ಟರ್ನಲ್ಲಿ ಸಿನಿಮಾದ ನಿರ್ಮಾಪಕರು, ನಿರ್ದೇಶಕರು, ನಟರ ಹೆಸರುಗಳು ಮಾತ್ರವೇ ಇವೆ.
‘ಡೆವಿಲ್’ ಸಿನಿಮಾ ಅನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಜೊತೆಗೆ ಇದು ಅವರ ಎರಡನೇ ಸಿನಿಮಾ. ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ಅಜನೀಶ್ ಲೋಕನಾಥ್, ಸಿನಿಮಾನಲ್ಲಿ ರಜನಾ ರೈ, ಮಹೇಶ್ ಮಂಜ್ರೇಕರ್, ವಿನಯ್ ಗೌಡ ಇನ್ನೂ ಹಲವರು ನಟಿಸಿದ್ದಾರೆ.
View this post on Instagram