ತಜ್ಞರ ವರದಿಯಲ್ಲಿ ಶಾಕಿಂಗ್ ಅಂಶ ಬಹಿರಂಗ! ಬೆಂಗಳೂರಿನಲ್ಲಿ ಹಸಿರು ಪರಿಸರ ಇರೋದು ಇಷ್ಟೇನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಭಿವೃದ್ಧಿ ಹೆಸರಲ್ಲಿ ದಿನದಿಂದ ದಿನಕ್ಕೆ ಮರಗಳ ಮಾರಣ ಹೋಮವಾಗುತ್ತಿದೆ. ಹಾಗಾಗಿ ಹಸಿರು ಮಾಯವಾಗುತ್ತಿದೆ. ಇದಕ್ಕೆ ಪುರಾವೆ ಕೂಡ ಸಿಕ್ಕಿದೆ. ಐಐಎಸ್​​ಸಿ ತಜ್ಞರು ಹೊಸದೊಂದು ವರದಿಯನ್ನು ಬಿಡುಗಡೆ ಮಾಡಿದ್ದು, ಆ ವರದಿಯಲ್ಲಿ ಶಾಕಿಂಗ್ ಅಂಶಗಳನ್ನು ಬೆಳಕಿಗೆ ಬಂದಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ನ ವಿಜ್ಞಾನಿಗಳ ಪ್ರಕಾರ, ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇದರಿಂದ ಮುಂದೆ ನಗರದಲ್ಲಿ ಏನೆಲ್ಲಾ ಸಮಸ್ಯೆ ಆಗಬಹುದು, ಇದರಿಂದ ಜನರು ಯಾವ ತೊಂದರೆಗಳನ್ನು ಎದುರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಗಾರ್ಡನ್ ಸಿಟಿ ಬೆಂಗಳೂರಲ್ಲಿ 1970ರಲ್ಲಿ 70% ಗ್ರೀನ್ ಕವರ್ ಆಗಿತ್ತು. ಆದರೆ ಈಗ 50 ವರ್ಷದಲ್ಲಿ 3%ಗೆ ಪರಿಸರ ಇಳಿದಿದೆ. ಇದರಿಂದ ಈಗಾಗಲೇ ಗ್ಲೋಬಲ್ ವಾರ್ಮಿಂಗ್ ಎಮರ್ಜೆನ್ಸಿ ನಿರ್ಮಾಣವಾಗಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಬದಲಾವಣೆ ಆಗುತ್ತಿದೆ.

33% ಪರಿಸರ ಉಳಿಸಬೇಕೆಂಬ ಗುರಿ ಇದೆ. ಈ ನಿಟ್ಟಿನಲ್ಲಿ ಈಗಲಾದರೂ ಎಚ್ಚತ್ತುಕೊಂಡು 10 ರಿಂದ 11% ಪರಿಸರವನ್ನ ಬೆಂಗಳೂರಿನಲ್ಲಿ ಹೆಚ್ಚಳ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತುಂಬಾ ಸಮಸ್ಯೆ ಆಗಲಿದೆ ಎಂದು ವರದಿ ಹೇಳಿದೆ.

ಇನ್ನೂ ಪರಿಸರ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಏನೆಲ್ಲಾ ತೊಂದರೆಗಳು ಆಗಬಹುದು ಅಂತ ನೋಡುವುದಾದರೆ, ವಾಯು ಮಾಲಿನ್ಯ ಜಾಸ್ತಿ ಆಗುತ್ತದೆ. ಬೋರ್ವೆಲ್​ಗಳು ಬತ್ತಿ ಹೋಗುತ್ತವೆ. ಪ್ರಾಣಿ-ಪಕ್ಷಿಗಳು ಇರುವುದಿಲ್ಲ. ಬಯೋಡೈವರ್ಸಿಟಿ ಕಳೆದುಕೊಳ್ಳಬೇಕಾಗುತ್ತದೆ. ಹೀಟ್ ಐಲ್ಯಾಂಡ್ ಆಗುತ್ತದೆ, ಬಿಸಿಲು ಪ್ರಮಾಣ ಜಾಸ್ತಿ ಆಗುತ್ತೆ. 45% ಗಿಂತ ಜಾಸ್ತಿ ಬಿಸಿಲು ಬರುತ್ತೆ. ಜನರ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!