2025ರ ಫ್ಯಾಷನ್ ಟ್ರೆಂಡ್ ಗಳಲ್ಲಿ ಮಹಿಳೆಯರ ಜೀನ್ಸ್ ವಿನ್ಯಾಸಗಳಲ್ಲಿ ಸಾಕಷ್ಟು ವೆರೈಟಿ ಬದಲಾವಣೆಗಳು ಕಂಡುಬರುತ್ತಿವೆ. ಕೇವಲ ಆರಾಮವಲ್ಲ, ಸ್ಟೈಲಿಷ್ ಲುಕ್‌ಗೂ ಸಹ ಜೀನ್ಸ್‌ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ವರ್ಷವೂ ಹಲವು ಹೊಸ ಶೈಲಿಗಳು ಟ್ರೆಂಡ್ ಆಗಿವೆ.
ಬ್ಯಾಗಿ ಜೀನ್ಸ್ – ಆರಾಮಕ್ಕೂ ಫ್ಯಾಷನ್‌ಗೂ ಬೆಸ್ಟ್
2025ರಲ್ಲಿ ಜೀನ್ಸ್‌ಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಸ್ಟೈಲ್ ಅಂದ್ರೆ ಅದು ಬ್ಯಾಗಿ ಅಥವಾ ಲೂಸ್‌ಫಿಟ್ ಜೀನ್ಸ್. ಸಡಿಲತೆಯಿಂದಲೂ ಆರಾಮದಾಯಕವಾದ ಈ ಜೀನ್ಸ್‌ಗಳು ಪ್ರತಿದಿನದ ಉಪಯೋಗಕ್ಕೆ ಸೂಕ್ತ. ಕ್ರಾಪ್ ಟಾಪ್, ಟೀ ಶರ್ಟ್ ಅಥವಾ ಶರ್ಟ್‌ಗಳ ಜೊತೆಗೆ ಹಾಕಿದಾಗ ಇದು ಕ್ಲಾಸಿಕ್ ಮತ್ತು ಟ್ರೆಂಡಿ ಲುಕ್ ನೀಡುತ್ತದೆ.
Y2K ಲುಕ್ ಈಗ ಮತ್ತೆ ಫ್ಯಾಷನ್ – ಲೋ-ರೈಸ್ ಜೀನ್ಸ್
2000ರ ದಶಕದ ಟೀನ್ ಫ್ಯಾಷನ್ ಮತ್ತೆ ಬಂದಿದೆ. ಲೋ-ರೈಸ್ ಜೀನ್ಸ್ ಮತ್ತೆ ಟ್ರೆಂಡ್ ಆಗುತ್ತಿದೆ. ಇದಕ್ಕೆ ಸರಿಯಾದ ಟಾಪ್ ಮತ್ತು ಬೆಲ್ಟ್‌ಗಳೊಂದಿಗೆ ಹಾಕಿದ್ರೆ, ಪಾರ್ಟಿ ಅಥವಾ ಕ್ಯಾಂಪಸ್ ಲುಕ್ ಗೆ ಬೆಸ್ಟ್.
ಸ್ಟ್ರೇಟ್ ಲೆಗ್ ಜೀನ್ಸ್ – ಎವರ್ಗ್ರೀನ್ ಹಿಟ್
ಎವರ್ಗ್ರೀನ್ ಹಿಟ್ ಎಂದರೆ ಸ್ಟ್ರೇಟ್ ಕಟ್ ಜೀನ್ಸ್. ಇದು ಯಾವ ರೀತಿಯ ಬಾಡಿ ಶೇಪ್‌ಗೂ ಹೊಂದಿಕೊಳ್ಳುತ್ತೆ. ಅಧಿಕೃತ ಕಾರ್ಯಕ್ರಮಗಳು ಅಥವಾ ಕ್ಯಾಶುವಲ್ ವೇರ್‌ಗೆ ಸೊಗಸಾದ ಆಯ್ಕೆ. 2025ರಲ್ಲೂ ಇದು ಬೆಸ್ಟ್ ಫ್ಯಾಷನ್ ಒಪ್ಶನ್.
ಡೆನಿಂ ವರ್ಣವಿವಿಧತೆ – ಬಣ್ಣದ ಜೀನ್ಸ್‌ಗಳು ಮತ್ತೆ ಟ್ರೆಂಡ್‌ಗೆ
ಸಾಮಾನ್ಯ ನೀಲಿ ಬಣ್ಣದ ಡೆನಿಂ ಜೀನ್ಸ್‌ಗಳ ಜೊತೆಗೆ ಈಗ ಪಿಂಕ್, ಲೈಟ್ ಗ್ರೀನ್, ಪಸ್ತೆಲ್ ಬ್ಲೂ ಮತ್ತು ಆಲಿವ್ ಗ್ರೀನ್ ಬಣ್ಣದ ಜೀನ್ಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಬಣ್ಣದಿಂದಲೇ ವಿಭಿನ್ನ ವ್ಯಕ್ತಿತ್ವ ಹೊರಹೊಮ್ಮುವಂತಹ ಈ ಟ್ರೆಂಡ್ ಯುವತಿಯರ ನಡುವೆ ವೇಗವಾಗಿ ಹಬ್ಬಿದೆ.
ಡಿಸ್ಟ್ರೆಸ್ಸ್ಡ್ ಮತ್ತು ರಿಪ್ಡ್ ಜೀನ್ಸ್ – ಯೂಥ್ ಸ್ಟೈಲ್ ಗೆ ಸಿಂಬಲ್
2025ರ ಯುವಜನರಲ್ಲಿ ರಿಪ್ಡ್ ಮತ್ತು ಡಿಸ್ಟ್ರೆಸ್ಸ್ಡ್ ಜೀನ್ಸ್ ಇನ್ನೂ ಫ್ಯಾಷನ್ ಕಿಂಗ್ಸ್. ಇದು ಎಡ್ಜಿ ಲುಕ್ ನೀಡುತ್ತದೆ. ವಿಶೇಷವಾಗಿ ಟ್ರೆಂಡಿಂಗ್ ಸ್ನೀಕರ್ಸ್‌ಗಳ ಜೊತೆ ಹಾಕಿದರೆ, ಇದು ಆಧುನಿಕ ಶೈಲಿಗೆ ತಕ್ಕಂತೆ ಕಾಣುತ್ತದೆ.