ವಾರ್ಡ್ರೋಬ್ ಹಣದ ಭದ್ರತೆ ಮಾತ್ರವಲ್ಲ, ಅದೃಷ್ಟವಂತಿಕೆಯನ್ನೂ ಬೀರುವ ಸ್ಥಾನ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಶಾಸ್ತ್ರದ ಪ್ರಕಾರ, ಮನೆಯ ಬೀರು ಅಥವಾ ವಾರ್ಡ್ರೋಬ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಲಕ್ಷ್ಮಿಯ ಕಟಾಕ್ಷ ದೊರೆಯುತ್ತದೆ ಎಂಬ ನಂಬಿಕೆಯಿದೆ.
ವಾಸ್ತು ಪ್ರಕಾರ, ಬೀರುವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡುವುದು ಹೆಚ್ಚು ಶ್ರೇಷ್ಠ. ಈ ದಿಕ್ಕು ಕುಬೇರನ ಸ್ಥಾನವಾಗಿದ್ದು, ಸಂಪತ್ತಿನ ದಿಕ್ಕೆಂದು ಪರಿಗಣಿಸಲಾಗಿದೆ. ಬೀರು ಈ ದಿಕ್ಕಿನಲ್ಲಿ ಇದ್ದರೆ ಆರ್ಥಿಕ ವೃದ್ಧಿಗೆ ಸಹಕಾರಿಯಾಗುತ್ತದೆ.
ಅಷ್ಟೇ ಅಲ್ಲದೆ, ಬೀರುವಿನಲ್ಲಿ ಕೆಂಪು ಬಟ್ಟೆಯನ್ನು ಇಡುವುದು ಹಣದ ಹರಿವಿಗೆ ಅಡ್ಡಿಯೆನಿಸಬಹುದು. ಬದಲಿಗೆ ಬಿಳಿ ಬಟ್ಟೆಗಳನ್ನು ಬಳಸುವುದು ಒಳ್ಳೆಯದು. ಸಾಧ್ಯವಾದರೆ, ಬೀರುವಿನ ಗೋಡೆಗಳಿಗೆ ಬಿಳಿ ಬಣ್ಣ ಬಳಿಯುವುದು ಸೂಕ್ತ. ಜೊತೆಗೆ ಬೀರುವಿನಲ್ಲಿ ಲಕ್ಷ್ಮೀ ಅಷ್ಟೋತ್ತರ ಮತ್ತು ಗೋವಿಂದನ ನಾಮ ಪುಸ್ತಕವನ್ನು ಇಡುವುದರಿಂದ ಧನದ ದೇವಿ ಶಾಶ್ವತವಾಗಿ ನೆಲೆಸುತ್ತಾಳೆ ಎನ್ನಲಾಗಿದೆ.
ಚಿನ್ನ ಮತ್ತು ನಗದುನ್ನು ಬೀರುವಿನಲ್ಲಿ ಪ್ರತ್ಯೇಕವಾಗಿ ಇರಿಸುವುದು, ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ಲವಂಗ–ಕರ್ಪೂರ ಇರಿಸುವುದರಿಂದ ಧನಲಾಭವಾಗುತ್ತದೆ. ಈ ಕ್ರಮಗಳು ಸಾಧ್ಯವಾಗದಿದ್ದರೂ, ಕರ್ಪೂರವನ್ನಾದರೂ ಇರಿಸುವ ಮೂಲಕ ಶುಭ ಫಲ ದೊರೆಯುತ್ತದೆ.
ಪ್ರತಿದಿನ ಬೀರುವನ್ನು ತೆರೆದು ಅಗರಬತ್ತಿ ಹಚ್ಚುವ ಅಭ್ಯಾಸವೂ ದೇವಿಯ ಕೃಪೆಗೆ ಕಾರಣವಾಗುತ್ತದೆ. ಲಕ್ಷ್ಮಿ ದೇವಿಯು ತಾವರೆಯಲ್ಲಿ ಕುಳಿತು ಚಿನ್ನದ ನಾಣ್ಯ ಹರಿಸುತ್ತಿರುವ ಚಿತ್ರವನ್ನು ಬೀರುವ ಮೇಲೆ ಅಂಟಿಸುವುದೂ ಶ್ರೇಷ್ಠ ಎಂದು ಹೇಳಲಾಗಿದೆ.
ಕೊನೆಗೆ, ಬೀರುವಿನ ಮೇಲೆ “ಶುಭಂ ಲಾಭಂ” ಎಂಬ ಬರಹದೊಂದಿಗೆ ಸ್ವಸ್ತಿಕ ಚಿಹ್ನೆ ಹಾಕುವುದರಿಂದ ಧನದ ಹರಿವು ಹೆಚ್ಚಾಗುತ್ತದೆ. ಈ ರೀತಿಯ ಸರಳ ಆದರೆ ಮಹತ್ವಪೂರ್ಣ ವಿಧಾನಗಳನ್ನು ಪಾಲಿಸಿದರೆ ಮನೆಮಾಳಿಗೆ ಧನ-ಧಾನ್ಯ ತುಂಬುತ್ತದೆ ಎಂಬ ನಂಬಿಕೆ ಇದೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)