ಒತ್ತಡದ ಬದುಕು, ಕೃತಕ ಸಂಬಂಧಗಳು, ನಮ್ಮ ದೈನಂದಿನ ಜೀವನವನ್ನು ಆವರಿಸಿರುವ ಈ ಸಂದರ್ಭದಲ್ಲಿ, ಒಂದು ಸರಳವಾದ ಅಪ್ಪುಗೆ (hug) ಹೆಚ್ಚು ಶಕ್ತಿಶಾಲಿಯಾದ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಮನೋವೈದ್ಯರು ಹಾಗೂ ಆರೋಗ್ಯ ತಜ್ಞರು ಹೇಳುತ್ತಾರೆ.
ಅಪ್ಪುಗೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವಾರು ಸಕಾರಾತ್ಮಕ ಪರಿಣಾಮಗಳಿವೆ. ಸ್ನೇಹ, ಪ್ರೀತಿಯನ್ನು ವ್ಯಕ್ತಪಡಿಸಲು ಮಾತ್ರವಲ್ಲದೇ, ಮಾನವ ಸಂವೇದನೆ, ಭದ್ರತೆ, ಹಾಗೂ ಒತ್ತಡ ನಿವಾರಣೆಗೆ ಸಹ ಇದೊಂದು ಉತ್ತಮ ಮಾರ್ಗವಾಗಿದೆ.
ಒತ್ತಡ ಕಡಿಮೆ ಮಾಡುತ್ತದೆ (Reduces Stress)
hug ಮಾಡಿದಾಗ ದೇಹದಲ್ಲಿ “ಆಕ್ಸಿಟೋಸಿನ್” ಎಂಬ ಹಾರ್ಮೋನ್ ಬಿಡುಗಡೆಯಾಗಿ, ಮನಸ್ಸಿಗೆ ಶಾಂತಿ ನೀಡುತ್ತದೆ. ಇದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ.
ಹೃದಯ ಆರೋಗ್ಯಕ್ಕೆ ಉತ್ತಮ (Good for Heart Health)
ದಿನವೂ ಆಗಾಗ್ಗೆ ಪ್ರೀತಿಯಿಂದ ಮಾಡಿದ ಅಪ್ಪುಗೆ, ಅಪ್ಪುಗೆ ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ. ಇದರಿಂದ ಬಿಪಿ (ಬ್ಲಡ್ ಪ್ರೆಷರ್) ಕಡಿಮೆಯಾಗುವ ಸಾಧ್ಯತೆ ಇದೆ.
ಸಂಬಂಧಗಳನ್ನು ಬಲಪಡಿಸುತ್ತದೆ (Strengthens Relationships)
ಅಪ್ಪುಗೆ ಪ್ರೀತಿ, ಆತ್ಮೀಯತೆ, ಮತ್ತು ಭದ್ರತೆಯ ಸಂಕೇತ. ಮನೆಯವರು, ಸ್ನೇಹಿತರು ಅಥವಾ ಜೀವನ ಸಂಗಾತಿಗೆ ನೀಡುವ ಅಪ್ಪುಗೆ, ಸಂಬಂಧವನ್ನು ಗಾಢವಾಗಿಸುತ್ತದೆ.
ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ (Boosts Mental Wellness)
ಅಪ್ಪುಗೆಯಿಂದ ಮನಸ್ಸು ಖುಷಿಯಾಗುತ್ತದೆ. ಇದರಿಂದ ನಿಮ್ಮ ಮಾನಸಿಕ ಸ್ಥಿತಿ ಉತ್ತಮಗೊಳ್ಳುತ್ತದೆ.
ಬೇರೆ ಯಾವ ಔಷಧಿ ಇಲ್ಲದೆ, ಒಂದು ಪ್ರಾಮಾಣಿಕ ಅಪ್ಪುಗೆ ನಿಮ್ಮ ದಿನವನ್ನೇ ಬದಲಾಯಿಸಬಲ್ಲದು.