ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಣಿಜ್ಯ ತೆರಿಗೆ ಇಲಾಖೆಯ ‘ತೆರಿಗೆ ನೋಟಿಸ್’ ಜಾರಿ ವಿರೋಧಿಸಿ ಸಣ್ಣ ವ್ಯಾಪಾರಿಗಳು ಜುಲೈ.25 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ನಗರದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದ್ದು, ರಾಜ್ಯಾದ್ಯಂತ ಲಕ್ಷಾಂತರ ಸಣ್ಣ ವ್ಯಾಪಾರ ಮಾಲೀಕರು ಮತ್ತು ಅವರ ಕುಟುಂಬಗಳು ಪ್ರತಿಭಟನೆ ನಡೆಸಲಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ಕಾರ್ಮಿಕರ ಮಂಡಳಿಯು, ಸಣ್ಣ ವ್ಯಾಪಾರಿಗಳಿಗೆ 2021 ರ ಹಿಂದಿನ 20 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳವರೆಗಿನ ತೆರಿಗೆ ನೋಟಿಸ್ ಗಳನ್ನು ನೀಡಿದ್ದಾರೆ. ಈ ನೋಟಿಸ್‌ಗಳನ್ನು ಯಾವುದೇ ಪೂರ್ವ ಮಾಹಿತಿ ಅಥವಾ ವಿವರಣೆಯಿಲ್ಲದೆ ನೀಡಲಾಗಿದೆ ಎಂದು ಆರೋಪಿಸಿದೆ.
ಈ ಪ್ರತಿಭಟನೆಯಲ್ಲಿ ಬೇಕರಿಗಳು, ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ಹೂವಿನ ಅಂಗಡಿಗಳು, ಚಹಾ ಮಾರಾಟಗಾರರು ಮತ್ತು ಮಾಂಸದ ಅಂಗಡಿಗಳ ಮಾಲೀಕರು ಭಾಗವಹಿಸಲಿದ್ದಾರೆ.