ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿಯಾಗಿ ಬಣ್ಣದ ಜಗತ್ತಿನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಹೊಸ ಆವೃತ್ತಿಯೊಂದಿಗೆ ಅಭಿಮಾನಿಗಳ ಮುಂದೆ ಬರುವ ತಯಾರಿಯಲ್ಲಿ ಮಾಡಿದ್ದಾರೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಈ ತಾರೆ ಇದೀಗ ತಮ್ಮದೇ ಆದ ವ್ಯವಹಾರ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಇತ್ತೀಚೆಗಿನ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ತಮ್ಮ ತಾಯಿಯ ಜೊತೆಗಿನ ಸಂಭಾಷಣೆಯ ಮೂಲಕ ರಶ್ಮಿಕಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
“ಇಂದು ನಾನು ಬಹಳ ಮುಖ್ಯವಾದ ಶೂಟಿಂಗ್‌ಗೆ ಹೋಗುತ್ತಿದ್ದೇನೆ. ನೀನು ಹೇಳಿದ ವಿಷಯವೇ ಈ ಹೊಸ ಬ್ಯುಸಿನೆಸ್ ಆಗಿದೆ” ಎಂದು ರಶ್ಮಿಕಾ ತಮ್ಮ ತಾಯಿಗೆ ತಿಳಿಸಿದ್ದಾರೆ. ಇದಕ್ಕೆ ತಾಯಿ ಪ್ರೀತಿಯಿಂದ “ನೀನು ಒಳ್ಳೆಯದನ್ನು ಮಾಡುತ್ತಿದ್ದೀಯ” ಎಂದು ಹಾರೈಸಿದ್ದಾರೆ. ಈ ಸಂಭಾಷಣೆಯೊಂದಿಗೆ ರಶ್ಮಿಕಾ ಹೃದಯಸ್ಪರ್ಶಿ ಸಂದೇಶವನ್ನೂ ಹಂಚಿಕೊಂಡಿದ್ದಾರೆ.
ಅವರು ಬರೆದಿರುವ ನೋಟ್‌ನಲ್ಲಿ, “ಅಮ್ಮನ ಮಾತುಗಳು ಎಂದೆಂದಿಗೂ ನನ್ನನ್ನು ಮುನ್ನಡೆಸುವ ಪ್ರೇರಣೆಯಾಗಿವೆ. ಅವಳ ಅನುಮೋದನೆ ಸಿಕ್ಕಾಗ ನಾನು ಸರಿಯಾದ ದಾರಿಗೆ ಹೋಗುತ್ತಿದ್ದೇನೆ ಎಂಬ ಭರವಸೆಯಾಗುತ್ತದೆ. ಲವ್ ಯು, ಮಾ!” ಎಂದು ಮರೆದುಕೊಂಡಿದ್ದಾರೆ. ಹೊಸ ಉದ್ಯಮದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲದಿದ್ದರು, ಈ ವಿಡಿಯೋ ರಶ್ಮಿಕಾ ಅಭಿಮಾನಿಗಳಲ್ಲಿ ಕುತೂಹಲ ಉಂಟುಮಾಡಿದೆ.
ಇದಕ್ಕೂ ಮೊದಲು, ಪುಷ್ಪ ಮತ್ತು ಅನಿಮಲ್ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ರಶ್ಮಿಕಾ ದೇಶಾದ್ಯಂತ ಪ್ರಖ್ಯಾತಿ ಗಳಿಸಿದ್ದರು. ಇದೀಗ ತಮ್ಮದೇ ಆದ ಹೊಸ ಹಾದಿ ಆರಿಸಿಕೊಂಡಿರುವ ನಟಿಯು ವೃತ್ತಿಜೀವನದಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ.