CINE | ಭರ್ಜರಿಯಾಗಿ ಶೂಟಿಂಗ್ ಮುಗಿಸಿದ ‘ಕಾಂತಾರ: ಚಾಪ್ಟರ್ 1’: ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ ಹೊಂಬಾಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಷಬ್ ಶೆಟ್ಟಿ ಅಭಿನಯಿಸಿ ಹಾಗೂ ನಿರ್ದೇಶಿಸಿರುವ ಬಹು ನಿರೀಕ್ಷಿತ ಕನ್ನಡ ಚಲನಚಿತ್ರ ‘ಕಾಂತಾರ: ಚಾಪ್ಟರ್ 1’ ಶೂಟಿಂಗ್‌ ಇದೀಗ ಪೂರ್ಣಗೊಂಡಿದೆ. ಈ ಕುರಿತ ಅಧಿಕೃತ ಘೋಷಣೆಯನ್ನು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುವೂ ಮೂಲಕ ಮಾಡಿದೆ.

‘ಕೆಜಿಎಫ್’, ‘ಸಲಾರ್’, ‘ರಾಜಕುಮಾರ’ ಹಾಗೂ ‘ಕಾಂತಾರ’ ಚಿತ್ರದೊಂದಿಗೆ ಯಶಸ್ಸು ಕಂಡಿರುವ ಹೊಂಬಾಳೆ ಫಿಲ್ಮ್ಸ್, ‘ಕಾಂತಾರ: ಚಾಪ್ಟರ್ 1’ ಗೆ ಯಶಸ್ಸು ಸಿಗುತ್ತದೆಯೋ ನೋಡೋಣ ಎನ್ನುವ ಕಾತುರ ಮೂಡಿತ್ತು. ಇದೀಗ ಬಿಡುಗಡೆಯಾದ ಮೇಕಿಂಗ್ ವಿಡಿಯೋದಲ್ಲಿ ಚಿತ್ರದ ವಿಭಿನ್ನ ದೃಶ್ಯ ಭಾವನೆಗಳು ಹಾಗೂ ಬೃಹತ್ ನಿರ್ಮಾಣ ತಂತ್ರಜ್ಞಾನವನ್ನೂ ಒದಗಿಸಿದ್ದ ತಂಡದ ಪರಿಶ್ರಮ ಈ ವಿಡಿಯೋ ದಲ್ಲಿ ಸ್ಪಷ್ಟವಾಗಿದೆ.

ಚಿತ್ರದ ತಾಂತ್ರಿಕ ತಳಹದಿಯ ಕುರಿತು ಮಾತನಾಡುವುದಾದರೆ, ಈ ಸಿನಿಮಾಗೆ ಸಂಗೀತವನ್ನು ಬಿ. ಅಜನೀಶ್ ಲೋಕನಾಥ್ ಅವರು ಸಂಯೋಜಿಸಿದ್ದಾರೆ. ಅವರ ‘ಕಾಂತಾರ’ ಪ್ರಥಮ ಭಾಗದ ಸಂಗೀತ ಭಾವನಾತ್ಮಕವಾಗಿ ಪ್ರೇಕ್ಷಕರ ಮನಗೆದ್ದಿತ್ತು. ಈ ಬಾರಿ ಕೂಡ ಆ ಮಟ್ಟದ ನಿರೀಕ್ಷೆಯಿದೆ. ಛಾಯಾಗ್ರಹಣವನ್ನು ಅರವಿಂದ್ ಕಶ್ಯಪ್ ಅವರು ನಿಭಾಯಿಸಿದ್ದು, ವಿನೇಶ್ ಬಂಗ್ಲನ್ ಅವರು ಪ್ರೊಡಕ್ಷನ್ ಡಿಸೈನ್ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಯಾವ ಪಾತ್ರಗಳು ಸೇರಿವೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲವಾದರೂ, ಅಕ್ಟೋಬರ್ 2ರಂದು ಈ ಚಿತ್ರವು ಪ್ರಪಂಚದಾದ್ಯಂತ ತೆರೆ ಕಾಣಲಿದೆ. ವಿಶೇಷವೆಂದರೆ, ಕನ್ನಡ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿ ಏಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಇದು ಭಾರತೀಯ ಚಲನಚಿತ್ರಗಳ ಸಾಂಸ್ಕೃತಿಕ ವಿವಿಧತೆಯನ್ನು ಜಗತ್ತಿಗೆ ಪರಿಚಯಿಸಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!