ಶಶಿ ತರೂರ್ ನಮ್ಮೊಂದಿಗಿಲ್ಲ, ಸ್ವಪಕ್ಷದ ಕಾರ್ಯಕ್ರಮಗಳಿಗೆ ನೋ ಎಂಟ್ರಿ: ಕಾಂಗ್ರೆಸ್ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸಂಸದ ಶಶಿ ತರೂರ್ ರಾಷ್ಟ್ರೀಯ ಭದ್ರತಾ ವಿಷಯದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸುವವರೆಗೆ ರಾಜ್ಯ ರಾಜಧಾನಿಯಲ್ಲಿ ನಡೆಯುವ ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಹೇಳಿದ್ದಾರೆ.

ಕೊಚ್ಚಿಯಲ್ಲಿ ಶನಿವಾರ ಮಾತನಾಡಿದ್ದ ತರೂರ್, ರಾಷ್ಟ್ರ ಮೊದಲು. ಪಕ್ಷಗಳು ದೇಶವನ್ನು ಉತ್ತಮಗೊಳಿಸುವ ಸಾಧನಗಳಾಗಿವೆ ಎಂದು ಹೇಳಿಕೆ ನೀಡಿದ್ದರು.

ಇದೀಗ ತಿರುವಂತಪುರಂನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುರಳೀಧರನ್, ರಾಷ್ಟ್ರೀಯ ಭದ್ರತಾ ವಿಷಯದ ಬಗ್ಗೆ ತಮ್ಮ ನಿಲುವನ್ನು ಬದಲಾಯಿಸುವವರೆಗೆ ಶಶಿ ತರೂರ್ ಅವರನ್ನು ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರೂ ಆಗಿರುವ ತರೂರ್ ಅವರನ್ನು ಇನ್ನು ಮುಂದೆ “ನಮ್ಮಲ್ಲಿ ಒಬ್ಬರು” ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಸಂಸದರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ತರೂರ್ ತಮ್ಮ ನಿಲುವನ್ನು ಬದಲಾಯಿಸುವವರೆಗೆ ತಿರುವನಂತಪುರಂನಲ್ಲಿ ನಡೆಯುವ ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ನಾವು ಅವರನ್ನು ಆಹ್ವಾನಿಸುವುದಿಲ್ಲ. ಅವರು ನಮ್ಮೊಂದಿಗಿಲ್ಲ, ಆದ್ದರಿಂದ ಅವರು ಕಾರ್ಯಕ್ರಮವನ್ನು ಬಹಿಷ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ದೇಶ ಮತ್ತು ಅದರ ಗಡಿಗಳಲ್ಲಿ ವಿಚಾರದಲ್ಲಿ ತರೂರ್ ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸರ್ಕಾರವನ್ನು ಬೆಂಬಲಿಸುವ ಕಾರಣ ಬಹಳಷ್ಟು ಜನರು ಅವರನ್ನು ಟೀಕಿಸಿದ್ದಾರೆ . ಆದ್ರೆ ಅವರು ನಾನು ನನ್ನ ನಿಲುವಿಗೆ ಬದ್ಧನಾಗಿರುವುದಾಗಿ ತಿಳಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!