ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಜು. 23ರಂದು ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ. ಈ ಸಂದರ್ಭ ಭಾರತದ ಮಾಜಿ ವಿಕೆಟ್ ಕೀಪರ್ ಫಾರೂಖ್ ಎಂಜಿನಿಯರ್ ಮತ್ತು ವೆಸ್ಟ್ ಇಂಡೀಸ್ ದಂತಕಥೆ ಕ್ಲೈವ್ ಲಾಯ್ಡ್ ಅವರ ಹೆಸರನ್ನು ಇಲ್ಲಿನ ಐಕಾನಿಕ್ ಓಲ್ಡ್ ಟ್ರಾಫರ್ಡ್ ಮೈದಾನದ ಸ್ಟ್ಯಾಂಡ್‌ಗಳಿಗೆ ಇಡಲು ಸಿದ್ಧತೆ ನಡೆದಿದೆ.
ಎಂಜಿನಿಯರ್ ಲಂಕಾಶೈರ್ ಕೌಂಟಿ ತಂಡದ ಪರ ಸುಮಾರು ಒಂದು ದಶಕದ ಕಾಲ ಆಡಿದ್ದರೆ, ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಲಾಯ್ಡ್ ಎರಡು ದಶಕಗಳ ಕಾಲ ಕ್ಲಬ್ ಪರ ಆಡಿದ್ದರು.
‘ಲಾಯ್ಡ್ ಮತ್ತು ಎಂಜಿನಿಯರ್ ಕ್ಲಬ್‌ನ ಇತಿಹಾಸಕ್ಕೆ ಅಳಿಸಲಾಗದ ಕೊಡುಗೆಗಳನ್ನು ನೀಡಿದ್ದಾರೆ. ಕ್ಲಬ್‌ನ ಇಬ್ಬರು ದಂತಕಥೆಗಳಿಗೆ ಇದು ಸೂಕ್ತವಾದ ಗೌರವವಾಗಿದೆ” ಎಂದು ಕ್ಲಬ್ ತಿಳಿಸಿವೆ.
ಮುಂಬೈ ಮೂಲದ ಎಂಜಿನಿಯರ್ ಲಂಕಾಷೈರ್ ತಂಡಕ್ಕೆ ಪದಾರ್ಪಣೆ ಮಾಡಿದಾಗ, ಕ್ಲಬ್ 15 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ಪ್ರಮುಖ ಪ್ರಶಸ್ತಿಯನ್ನು ಹೊಂದಿರಲಿಲ್ಲ ಆದರೆ 1970 ಮತ್ತು 1975 ರ ನಡುವೆ ನಾಲ್ಕು ಬಾರಿ ಜಿಲೆಟ್ ಕಪ್ ಗೆಲ್ಲಲು ಅವರು ಸಹಾಯ ಮಾಡಿದರು.
ಓಲ್ಡ್ ಟ್ರಾಫರ್ಡ್ ಡ್ರೆಸ್ಸಿಂಗ್ ಕೊಠಡಿಯಿಂದ ನಾವು ವಾರ್ವಿಕ್ ರಸ್ತೆ, ರೈಲ್ವೆ ನಿಲ್ದಾಣವನ್ನು ನೋಡಬಹುದು ಮತ್ತು ಪಂದ್ಯಕ್ಕೂ ಮೊದಲು ನಾವು ತುಂಬಿದ ರೈಲುಗಳು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರನ್ನು ಖಾಲಿ ಮಾಡುವುದನ್ನು ನೋಡುತ್ತಿದ್ದೆವು ಎಂದು ಹಳೆಯ ನೆನಪುಗಳನ್ನು ಎಂಜಿನಿಯರ್ ನೆನಪಿಸಿಕೊಂಡರು.
ನಿವೃತ್ತಿಯ ನಂತರ, ಎಂಜಿನಿಯರ್ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ವೈಯಕ್ತಿಕ ಭೇಟಿಗಾಗಿ ಇಲ್ಲಿಗೆ ಬಂದಿರುವ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ ಕೂಡ ಕ್ಲಬ್‌ನ ಹಿರಿಯ ಅಧಿಕಾರಿಗಳ ಜತೆಗೆ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.