ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಯೊಂದರ ಮಾಸಿಕ ಬಾಡಿಗೆ 2.3 ಲಕ್ಷ ಮತ್ತು 23 ರೂ ಅಡ್ವಾನ್ಸ್.. ಅಚ್ಚರಿಯಾದ್ರೂ ಇದು ಸತ್ಯ.. ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲು ಹೋಗಿದ್ದ ವಿದೇಶಿ ಪ್ರಜೆಯೊಬ್ಬ ಇಲ್ಲಿನ ದರಗಳನ್ನು ಕೇಳಿ ಹೌಹಾರಿದ್ದಾರೆ.
ಮನೆ ಹುಡುಕುತ್ತಿದ್ದ ವಿದೇಶಿ ವ್ಯಕ್ತಿ ಬಾಡಿಗೆ ಮತ್ತು ಡೆಪಾಸಿಟ್ ನೋಡಿ ದಂಗಾಗಿದ್ದಾರೆ. ಅಲ್ಲದೆ ವಿಶ್ವದಲ್ಲೇ ಅತೀ ದುರಾಸೆ ಮಾಲೀಕರು ಇರುವುದು ಬೆಂಗಳೂರಿನಲ್ಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ದಿನೇ ದಿನೇ ಜನಸಂದಣಿ ಹೆಚ್ಚಾಗುತ್ತಿದ್ದು, ಕೆಲಸ ಅರಸಿ ಬರುವ ವಲಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಅಂತೆಯೇ ಬೆಂಗಳೂರಿನಲ್ಲಿ ಮನೆ ಹುಡುಕಾಟ ನಡೆಸಿದ್ದ ಕೆನಡಾ ಪ್ರಜೆ ಇಲ್ಲಿನ ದರಗಳನ್ನು ಕೇಳಿ ಆಘಾತಕ್ಕೊಳಗಾಗಿದ್ದಾರೆ. 4 ಬೆಡ್ ರೂಮಿನ ಮನೆಗೆ 2.3 ಲಕ್ಷ ರೂಪಾಯಿ ತಿಂಗಳ ಬಾಡಿಗೆ, ಬರೋಬ್ಬರಿ 23 ಲಕ್ಷ ರೂಪಾಯಿ ಅಡ್ವಾನ್ಸ್ ಮೊತ್ತ ಕೇಳಲಾಗಿದೆಯಂತೆ. ಈ ಬೇಡಿಕೆ ನೋಡಿದ ಕೆನಡಾ ಪ್ರಜೆ, ವಿಶ್ವದ ಯಾವುದೇ ಇತರ ನಗರದಲ್ಲಿ ಇಲ್ಲದ ದುಬಾರಿ ಬೆಲೆ ಬೆಂಗಳೂರಿನಲ್ಲಿದೆ.
ಬೆಂಗಳೂರಿನ ಮಾಲೀಕರು ಅತ್ಯಂತ ದುರಾಸೆ ಮನೆ ಮಾಲೀಕರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
Bengaluru landlords are the greediest in the world
Rs. 23 lakh security deposit (12 months rent) is OUTRAGEOUS
meanwhile, deposits in other cities:
NYC? 1 month
Toronto? 1 month
Singapore? 1 month per year of lease
SF? 2 months’
Dubai? 5%-10% of annual rent
London? 5-6 weeks’ pic.twitter.com/WPkl5o40C9— Caleb (@caleb_friesen2) July 21, 2025