Hair Care | ಬಾಳೆಹಣ್ಣು ತಿಂದು ಸಿಪ್ಪೆ ಬಿಸಾಡ್ತೀದ್ದೀರಾ? ಇಲ್ಲಿ ಕೇಳಿ… ಇದ್ರಿಂದ ಕೂದಲಿಗೆ ಎಷ್ಟು ಲಾಭ ಇದೆ ಗೊತ್ತ?

ಆರೋಗ್ಯಕರ, ದಪ್ಪ ಮತ್ತು ಹೊಳೆಯುವ ಕೂದಲು ಯಾರಿಗೆ ಬೇಡ ಹೇಳಿ? ಹೆಚ್ಚು ಹಣ ಖರ್ಚುಮಾಡುವ ಬದಲು ಮನೆಯಲ್ಲಿ ಇರುವ ಸರಳವಸ್ತುಗಳಿಂದ ಕೂದಲಿನ ಆರೈಕೆ ಮಾಡುವುದಾದರೆ ಅದಕ್ಕಿಂತ ಒಳ್ಳೆಯ ಐಡಿಯಾ ಏನಿರಬಹುದು ಅಲ್ವ? ಇಂತಹದೇ ಒಂದು ನೈಸರ್ಗಿಕ ಪರಿಹಾರವಂತೆ ಈ ಬಾಳೆಹಣ್ಣಿನ ಸಿಪ್ಪೆ. ಸಾಮಾನ್ಯವಾಗಿ ತ್ಯಾಜ್ಯವೆಂದು ಬಿಸಾಡುವ ಈ ಸಿಪ್ಪೆ ನಿಜಕ್ಕೂ ಕೂದಲು ಬೆಳವಣಿಗೆಗೆ ಬಹಳ ಉಪಯುಕ್ತ.

Banana Peel for hair: How to use Banana Peel to increase hair growth | -  Times of India

ವಿಶೇಷವಾಗಿ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ6 ಮತ್ತು ವಿಟಮಿನ್ ಸಿ ಇದ್ದು, ನೆತ್ತಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಿಂದ ನೆತ್ತಿಯ ರಕ್ತಪರಿಚಲನೆ ಸುಧಾರಣೆಯಾಗಿ, ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಜೊತೆಗೆ ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತೆ.

Banana Peel for hair: How to use Banana Peel to increase hair growth | -  Times of India

ಈ ಸಿಪ್ಪೆಯಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ಸ್‌ ವಿರುದ್ಧ ಹೋರಾಡಿ, ನೆತ್ತಿಯ ಆರೋಗ್ಯವನ್ನು ಕಾಪಾಡುತ್ತವೆ. ನೆತ್ತಿ ಮತ್ತು ಕೂದಲಿಗೆ ತೇವಾಂಶ ಒದಗಿಸುವ ಮೂಲಕ ತಲೆಹೊಟ್ಟು ಮತ್ತು ಒಣಕೂದಲಿನ ಸಮಸ್ಯೆ ಕಡಿಮೆಯಾ ಮಾಡುತ್ತೆ. ಸಿಲಿಕಾ ಅಂಶವು ಕೂದಲಿಗೆ ಹೊಳಪು ನೀಡುವುದಲ್ಲದೇ, ಅದರ ಸ್ಥಿತಿಸ್ಥಾಪಕತೆಯನ್ನೂ ಹೆಚ್ಚಿಸುತ್ತದೆ.

5 Benefits of Banana Peel For Skin and Hair | Femina.in

ಬಾಳೆಹಣ್ಣಿನ ಸಿಪ್ಪೆ ಬಳಸೋದು ಹೇಗೆ:

2-3 ಬಾಳೆಹಣ್ಣಿನ ಸಿಪ್ಪೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, 4 ಕಪ್ ನೀರಿನಲ್ಲಿ 10-15 ನಿಮಿಷ ಕುದಿಸಿ. ನಂತರ ತಣ್ಣಗಾಗಲು ಬಿಡಿ ಮತ್ತು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಬಹುದು.

ಶಾಂಪೂ ಮಾಡಿದ ನಂತರ ಈ ನೀರನ್ನು ನೆತ್ತಿ ಮತ್ತು ಕೂದಲಿಗೆ ಹಾಕಿ, 5-10 ನಿಮಿಷ ಮಸಾಜ್ ಮಾಡಿ, ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಅಥವಾ ಸ್ಪ್ರೇ ಬಾಟಲಿಯಲ್ಲಿ ಹಾಕಿ ನೇರವಾಗಿ ನೆತ್ತಿಗೆ ಸಿಂಪಡಿಸಬಹುದು.

ಅಲೋವೆರಾ ಜೆಲ್ ಅಥವಾ ತೆಂಗಿನ ಎಣ್ಣೆ ಜೊತೆಗೆ ಮಿಶ್ರಣ ಮಾಡಿ ಕೂದಲಿನ ಮಾಸ್ಕ್ ಆಗಿ ಉಪಯೋಗಿಸಬಹುದು.

ಈ ನೈಸರ್ಗಿಕ ವಿಧಾನವನ್ನು ನಿಯಮಿತವಾಗಿ ಅನುಸರಿಸಿದರೆ, ಆರೋಗ್ಯಕರ ಕೂದಲು ನಿಮ್ಮದೇ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!