February 7, 2026
Saturday, February 7, 2026
spot_img

ಗ್ಯಾರಂಟಿ ಕೊಟ್ಟು ದರ ಏರಿಸುವುದು ಯಾವ ನ್ಯಾಯ? ರಾಜ್ಯ ಸರ್ಕಾರಕ್ಕೆ HDK ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ ಪ್ರಯಾಣ ದರ ಶೇಕಡಾ 5ರಷ್ಟು ಏರಿಕೆ ಮಾಡಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾವುದೇ ದರ ಏರಿಸಿದರೂ ಜನ ಸಂತೋಷದಿಂದ ಕೊಡುತ್ತಾರೆ ಎನ್ನುವುದು ಮುಖ್ಯಮಂತ್ರಿಗಳ ಭ್ರಮೆ” ಎಂದು ಅವರು ಕಿಡಿಕಾರಿದ್ದಾರೆ.

ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಪಾಲು ಕೇವಲ 20% ಎಂದು ಹೇಳುತ್ತಲೇ, ದರ ಏರಿಕೆಯ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹೊರಿಸುವುದು ಸರಿಯಲ್ಲ. “ರಾಜ್ಯ ಸರ್ಕಾರವೇ ಹೆಚ್ಚಿನ ಹಣ ಹಾಕುತ್ತಿದೆ ಎಂದ ಮೇಲೆ, ದರ ನಿಗದಿ ಮಾಡುವ ಅಧಿಕಾರವೂ ಅವರಿಗೇ ಇರುತ್ತದೆ. ಹೀಗಿದ್ದರೂ ಕೇಂದ್ರವನ್ನು ದೂಷಿಸುವುದು ಏಕೆ?” ಎಂದು ಅವರು ಪ್ರಶ್ನಿಸಿದರು.

ಜನರಿಗೆ ಗ್ಯಾರಂಟಿ ನೀಡಿ ಆರ್ಥಿಕ ಶಕ್ತಿ ತುಂಬಿದ್ದೇವೆ ಎಂದು ಸರ್ಕಾರ ಜಾಹೀರಾತು ನೀಡುತ್ತಿದೆ. “ಜನರ ಬಳಿ ಹಣವಿದೆ, ಅವರು ಎಷ್ಟು ದರ ಏರಿಸಿದರೂ ನೀಡುತ್ತಾರೆ ಎಂಬ ಅಹಂಕಾರದಲ್ಲಿ ಸರ್ಕಾರವಿದೆ. ಆದರೆ ಇದು ಕೇವಲ ಭ್ರಮೆ,” ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !