ಹೊಸದಿಗಂತ ವರದಿ ತುಮಕೂರು:
ತುಮಕೂರು ತಾಲ್ಲೂಕಿನ ಕೋಳಾಲದ ಸರ್ಕಲ್ ನಲ್ಲಿ ನಡೆದ ಅಪಘಾತದಲ್ಲಿ ಬ್ಯಾಂಗಲ್ ಸ್ಟೋರ್, ಬೇಕರಿಗೆ ಲಾರಿ ನುಗ್ಗಿ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಅಪಘಾತದಲ್ಲಿ ಕಾಟೇನಹಳ್ಳಿ ಗ್ರಾಮದ ರಂಗಶಾಮಯ್ಯ 65 . ಪುರದಹಳ್ಳಿ ಗ್ರಾಮದ ಬೈಲಪ್ಪ 65 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೋಬಳಿ ಕೇಂದ್ರವಾದ ಕೋಳಾಲ ಸರ್ಕಲ್ ಜನನಿಬಿಡ ಪ್ರದೇಶವಾಗಿದ್ದು, ಲಾರಿ ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಗಲ್ ಸ್ಟೋರ್ ಹಾಗೂ ಬೇಕರಿಗೆ ಗುದ್ದಿದೆ ಇದರಿಂದ ಅಂಗಡಿ ಬಳಿ ನಿಂತಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಗ್ರಾಮದ ಕಾಂತರಾಜು, ಜಯಣ್ಣ, ಸಿದ್ದಗಂಗಮ್ಮ, ಮೋಹನ್ ಕುಮಾರ್ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.