ಮೇಷ
ಖಾಸಗಿ ಬದುಕು, ವೃತ್ತಿ ಬದುಕು ನಿಮಗೆ ಮೆಚ್ಚಿಗೆ ತರುವುದು. ನಿಮ್ಮ ಸಾಧನೆಗೆ ಇತರರ ಶ್ಲಾಘನೆ. ಆರೋಗ್ಯಪೂರ್ಣ ಆಹಾರ ಸೇವಿಸಿರಿ.
ವೃಷಭ
ಅನಿರೀಕ್ಷಿತ ಕಾರ್ಯದೊತ್ತಡ. ಅದನ್ನು ಸರಿಯಾಗಿ ನಿಭಾಯಿಸುವಿರಿ. ಚರ್ಮದ ಸಮಸ್ಯೆ ಕಾಣಿಸಿಕೊಂಡೀತು. ಉಳಿತಾಯ ಹೆಚ್ಚಿಸಿ.
ಮಿಥುನ
ವೃತ್ತಿಯ ಒತ್ತಡವು ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಪರಿಣಾಮ ಬೀರಬಹುದು. ದೈಹಿಕ ನೋವು ಸಂಭವ.
ಕಟಕ
ಪ್ರೀತಿಯ ವಿಷಯದಲ್ಲಿ ಗೊಂದಲದ ಮನಸ್ಥಿತಿ. ಸಂಬಂಧದ ವಿಚಾರದಲ್ಲಿ ಪ್ರಬುದ್ಧರಾಗಿ ನಡಕೊಳ್ಳಿ. ಕೆಟ್ಟ ಹವ್ಯಾಸ ತ್ಯಜಿಸುವ ನಿರ್ಧಾರ ತಾಳಿ.
ದೇಹಾರೋಗ್ಯಕ್ಕಿಂತ ಮನಸ್ಸಿನ ಆರೋಗ್ಯ ಮುಖ್ಯ. ಸಣ್ಣ ವಿಷಯಗಳಿಗೆ ಮನಸ್ಸು ಕೆಡಿಸಿಕೊಂಡು ಕೂರದಿರಿ. ಉಲ್ಲಸಿತ ಮನಸ್ಸು ಒಳ್ಳೆಯದು.
ಕನ್ಯಾ
ನೀವು ಕೈಗೊಳ್ಳುವ ಯಾವುದೇ ಕಾರ್ಯ ಇಂದು ಸಫಲತೆ ಕಾಣುವುದು. ಬಂಧುಗಳ ಜತೆಗಿನ ಮುನಿಸು ಶಮನ. ಆರ್ಥಿಕ ಉನ್ನತಿ.
ತುಲಾ
ವಿಭಿನ್ನ ಬಗೆಯ ಭಾವಗಳು ಇಂದು ನಿಮ್ಮನ್ನು ಕಾಡಬಹುದು. ವೃತ್ತಿಯಲ್ಲಿ ಹೊಣೆಗಾರಿಕೆ. ಸಹನೆಯಿರಲಿ, ಎಲ್ಲವೂ ಸುಸೂತ್ರವಾಗಲಿದೆ.
ವೃಶ್ಚಿಕ
ನಿಮ್ಮ ಇಷ್ಟದ ಕಾರ್ಯ ಮಾಡುವ ಅವಕಾಶ ದೊರಕುವುದು. ಒತ್ತಡ ನಿವಾರಣೆ. ಆತ್ಮೀಯರ ಜತೆ ಕೂಡಿ ಕಳೆಯುವ ಅವಕಾಶ.
ಧನು
ಇಂದು ನಿಮ್ಮ ಮನ ಸ್ಥಿತಿ ದೃಢವಾಗಿರದು. ಹಾಗಾಗಿ ಪ್ರಮುಖ ನಿರ್ಧಾರ ತಾಳದಿರಿ. ಮನ ದಳಲು ಆಲಿಸುವ ವ್ಯಕ್ತಿಗಳ ಜತೆ ಕಾಲ ಕಳೆಯಿರಿ.
ಮಕರ
ಜೀವನಶೈಲಿಯಲ್ಲಿ ಮಾಡುವ ಸಣ್ಣ ಬದಲಾ ವಣೆ ದೊಡ್ಡ ಪರಿಣಾಮ ಬೀರುವ ಕುರಿತು ನಿಮಗೆ ಅರಿವಾಗಲಿದೆ. ಖರ್ಚು ನಿಯಂತ್ರಿಸಿ.
ಕುಂಭ
ಸಂಬಂಧದಲ್ಲಿ ಉಂಟಾಗಿದ್ದ ತೊಡಕು ನಿವಾರಿಸಲು ಸೂಕ್ತ ದಿನ. ಸೂಕ್ತ ಸ್ಪಂದನೆ ದೊರಕುವುದು. ಆರೋಗ್ಯ ಸಮಸ್ಯೆ ಕಾಡಬಹುದು.
ಮೀನ
ನಿಮ್ಮದಿಂದು ಹೆಚ್ಚು ಗಂಭೀರ ಮನಸ್ಥಿತಿ. ಕೆಲಸದ ಕುರಿತು ಹೆಚ್ಚು ಶ್ರದ್ಧೆ. ಒತ್ತಡವೂ ಅಽಕ. ಇತರರು ನೆರವು ಕೇಳಿ ಮನಸ್ಸು ಕೆಡಿಸುವರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ