ಪರಿಸರದ ಜೊತೆ ಪಾಠ ಮಾಡೋಕೆ ಸಜ್ಜಾದ ತೋಟಗಾರಿಕೆ ಇಲಾಖೆ, ಕಬ್ಬನ್‌ ಪಾರ್ಕ್‌ಗೆ ತಪ್ಪದೇ ವಿಸಿಟ್‌ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಿಲಿಕಾನ್ ಸಿಟಿಯ ಆಕ್ಸಿಜನ್ ಹಬ್​​ನಂತಿರುವ ಕಬ್ಬನ್ ಪಾರ್ಕ್​ನಲ್ಲಿ ಇನ್ಮುಂದೆ ಗೈಡ್ ಜೊತೆ ನೇಚರ್ ವಾಕ್ ಮಾಡುವ ಅವಕಾಶ ಸಿಗಲಿದೆ.

ಕಬ್ಬನ್ ಪಾರ್ಕ್​ನಲ್ಲಿ ಸುಮ್ಮ ಸುಮ್ಮನೆ ಸುತ್ತಾಡುವವರ ಜೊತೆಗೆ ಅಲ್ಲಿನ ಮರಗಳು, ಅವುಗಳ ವೈಶಿಷ್ಟ್ಯ ಹಾಗೂ ಕಬ್ಬನ್ ಪಾರ್ಕ್​​ನಲ್ಲಿ ಅಡಗಿರುವ ವಿಶೇಷತೆಗಳನ್ನ ಪರಿಚಯಿಸುವುದಕ್ಕೆ ತೋಟಗಾರಿಕೆ ಹೊಸ ಪ್ಲ್ಯಾನ್​ ಮಾಡುತ್ತಿದ್ದು, ಇನ್ಮುಂದೆ ವೀಕೆಂಡ್ ನಲ್ಲಿ ಗೈಡ್ ಜೊತೆ ನೇಚರ್ ವಾಕ್ ಮಾಡುವ ಅವಕಾಶ ಸಿಗಲಿದೆ.

ಬೆಂಗಳೂರಿನ ಹಸಿರುತಾಣ, ಬಗೆ ಬಗೆಯ ಸಸ್ಯ, ಮರಗಳ ತಾಣ ಕಬ್ಬನ್ ಪಾರ್ಕ್​ನಲ್ಲಿ ಇದೇ ಜುಲೈ 27 ರಿಂದ ಹೊಸ ಕಾರ್ಯಕ್ರಮ ಆರಂಭಿಸುವುದಕ್ಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ. ಕಬ್ಬನ್ ಪಾರ್ಕ್​ನ ವಿಶೇಷತೆಗಳನ್ನ ಪರಿಚಯಿಸುವುದಕ್ಕೆ ಕಬ್ಬನ್ ವಾಕ್ಸ್ ಹೆಸರಲ್ಲಿ ಗೈಡ್ ಜೊತೆಗೆ ನೇಚರ್ ವಾಕ್ ಮಾಡುವುದಕ್ಕೆ ಅವಕಾಶ ಕೊಡಲಾಗುತ್ತಿದ್ದು, ಇದಕ್ಕಾಗಿ 10 ಜನ ಪರಿಸರ ತಜ್ಞರ ತಂಡ ನೇಮಕ ಮಾಡಲಾಗಿದೆ.

ಕಬ್ಬನ್ ವಾಕ್ ಅಂಗವಾಗಿ ಬುಧವಾರ ನಡೆದ ಟ್ರಯಲ್ ನೇಚರ್ ವಾಕ್​ನಲ್ಲಿ ಹೆಜ್ಜೆಹಾಕಿದ ತಜ್ಞರ ತಂಡ, ಕಬ್ಬನ್ ಪಾರ್ಕ್​ನಲ್ಲಿರುವ ಪ್ರಾಚೀನ ಮರಗಳು, ವಿಶೇಷ ಜಾಗಗಳ ಬಗ್ಗೆ ಮಾಹಿತಿ ನೀಡಿ ಗಮನಸೆಳೆದರು. ಈ ವೇಳೆ ಮಾತನಾಡಿದ ಕಬ್ಬನ್ ಪಾರ್ಕ್ ನಿರ್ದೇಶಕಿ ಕುಸುಮಾ, ಇನ್ಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರ ಈ ನೇಚರ್ ವಾಕ್ ನಡೆಯಲಿದ್ದು, ಈ ವಾಕ್​ನಲ್ಲಿ ಭಾಗವಹಿಸುವವರು ಆನ್ ಲೈನ್​​ನಲ್ಲಿ ಬುಕ್ಕಿಂಗ್ ಮಾಡಬೇಕು. ಜೊತೆಗೆ ವಯಸ್ಕರಿಗೆ 200 ರೂ ಮತ್ತು ಮಕ್ಕಳಿಗೆ 50 ರೂ. ಟಿಕೆಟ್ ನಿಗದಿ ಮಾಡಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!