‘ಡಿ’ ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಆರೋಪಿಗಳ ಪರವಾಗಿ ವಕೀಲರು ವಾದ ಮಂಡನೆ ನಡೆಸಿದ್ದು, ಸರ್ಕಾರದ ಪರವೂ ಪ್ರತಿವಾದ ಮಂಡನೆಯಾಯಿತು. ಎಲ್ಲಾ ವಾದ ಪ್ರತಿ ವಾದ ಮುಗಿದ ಹಿನ್ನೆಲೆಯಲ್ಲಿ, ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

ಈ ವಿಚಾರಣೆ ಕನಿಷ್ಠ ಹತ್ತು ದಿನಗಳ ನಂತರ ಮುಂದುವರೆಯಲಿದೆ ಎಂಬ ನಿರೀಕ್ಷೆಯಿದೆ. ನ್ಯಾಯಾಲಯವು ಮೂರು ಪುಟಗಳಿಗಿಂತ ಮೀರದಂತೆ ಪ್ರತಿಕ್ರಿಯೆಯನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಆರೋಪಿಗಳ ಮತ್ತು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿದೆ.

ಹೆಚ್ಚಿನ ಆಸಕ್ತಿಯ ವಿಷಯವೆಂದರೆ, ಈ ಹಿಂದೆ ಬೆನ್ನು ನೋವಿನ ಕಾರಣ intermediate bail ಪಡೆದ ದರ್ಶನ್ ನಂತರ ಸಂಪೂರ್ಣ ಜಾಮೀನು ಪಡೆದಿದ್ದರು. ಇದನ್ನು ಪ್ರಶ್ನಿಸಿದ ರಾಜ್ಯ ಸರ್ಕಾರ, ಹೈಕೋರ್ಟ್ ನೀಡಿದ ಜಾಮೀನನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಈ ಅರ್ಜಿ ವಿಚಾರಣೆಯ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಮಂಗಳವಾರವೇ ಈ ಅರ್ಜಿ ವಿಚಾರಣೆ ಮುಗಿಯಬೇಕಿತ್ತು. ದರ್ಶನ್‌ ಪರ ವಕೀಲರು ಇವತ್ತು ಪ್ರತಿವಾದ ಮಂಡಿಸಿದ್ದರು. ಕೊನೆ ಗಳಿಗೆಯಲ್ಲಿ ದಾಸನ ಪರ ವಕೀಲರು ಬದಲಾಗಿದ್ದು, ಈ ಕಾರಣದಿಂದಾಗಿ ಬೇಲ್ ರದ್ದು ಆಗುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಆದರೆ ಕೊನೆಗೆ, ಇಬ್ಬರು ನ್ಯಾಯಮೂರ್ತಿಗಳಾದ ಪರ್ಡಿವಾಲ ಮತ್ತು ಆರ್. ಮಹದೇವನ್ ಅವರ ಪೀಠದಲ್ಲಿ ವಿಚಾರಣೆ ನಡೆಸಿ, ಎಲ್ಲೆಡೆ ಲಿಖಿತ ತಜ್ಞ ಅಭಿಪ್ರಾಯದ ನಂತರ ತೀರ್ಪು ಪ್ರಕಟಿಸುವ ನಿರ್ಧಾರಕ್ಕೆ ಬಂತು.

ಇನ್ನು ನಟ ದರ್ಶನ್ ಅವರು ‘ಡೆವಿಲ್’ ಸಿನಿಮಾದ ಶೂಟಿಂಗ್‌ಗೆ ಥೈಲ್ಯಾಂಡ್ ಹೋಗಿದ್ದರು ಎಂಬ ವಿಷಯ ಕೂಡ ಸುದ್ದಿಯಲ್ಲಿದೆ. ಶೂಟಿಂಗ್ ಹೆಸರಿನಲ್ಲಿ ದರ್ಶನ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಹೀಗಾಗಿ, ಈ ಪ್ರಕರಣದ ಮುಂದಿನ ಪ್ರಗತಿ ಮತ್ತು ದರ್ಶನ್‌ಗೆ ಜಾಮೀನು ಮುಂದುವರೆಯುತ್ತದೋ ಅಥವಾ ರದ್ದಾಗುತ್ತದೋ ಎಂಬುದನ್ನು ತಿಳಿಯಲು ಇನ್ನು ಕೆಲ ದಿನಗಳು ಕಾಯಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!