ಸಿಹಿ-ಖಾರದ ಚಾಟ್ ಗಳ ಪೈಕಿ ಅಲೂ ಚಾಟ್ ಒಂದು. ಉತ್ತರ ಭಾರತದ ಬೀದಿ ಬದಿಗಳಲ್ಲಿ ಜನಪ್ರಿಯವಾದ ಈ ತಿನಿಸು ಇದೀಗ ದಕ್ಷಿಣ ಭಾರತದಲ್ಲಿಯೂ ಖ್ಯಾತಿ ಪಡೆಯುತ್ತಿದೆ. ಬೇಯಿಸಿದ ಆಲೂಗಡ್ಡೆಗೆ ವಿವಿಧ ಚಟ್ನಿ, ಮಸಾಲಾ ಪುಡಿ, ಲೆಮನ್ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ತಯಾರಿಸುವ ಈ ಚಾಟ್ ಬಾಯಲ್ಲಿಟ್ಟರೆ ಕರಗುವಷ್ಟು ರುಚಿಕರವಾಗಿರುತ್ತದೆ.
ಬೇಕಾಗುವ ಪದಾರ್ಥಗಳು:
2 ಬೇಯಿಸಿದ ಆಲೂಗಡ್ಡೆ,
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1/2 ಟೀಸ್ಪೂನ್ ಜೀರಿಗೆ-ಕೊತ್ತಂಬರಿ ಪುಡಿ
1/2 ಟೀಸ್ಪೂನ್ ಚಾಟ್ ಮಸಾಲಾ ಪೌಡರ್
1 ಟೀಸ್ಪೂನ್ ನಿಂಬೆ ರಸ
1/4 ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ
1 ಚಮಚ ಹಸಿರು ಕೊತ್ತಂಬರಿ ಚಟ್ನಿ
1½ ಟೇಬಲ್ಸ್ಪೂನ್ ಹುಣಸೆಹಣ್ಣಿನ ಸಿಹಿ ಚಟ್ನಿ
1/4 ಕಪ್ ಮೊಸರು
2 ಚಮಚ ಸೇವ್
2 ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
1½ ಚಮಚ ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ನಾನ್-ಸ್ಟಿಕ್ ಪ್ಯಾನ್ ನಲ್ಲಿ 1½ ಟೀ ಸ್ಪೂನ್ ಎಣ್ಣೆ ಬಿಸಿ ಮಾಡಿ. ಆಲೂಗಡ್ಡೆ ತುಂಡುಗಳನ್ನು ಹಾಕಿ, ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.
ಹುರಿದ ಆಲೂಗಡ್ಡೆ ತುಂಡುಗಳನ್ನು ಬಟ್ಟಲಿಗೆ ಹಾಕಿ ಅದರ ಮೇಲೆ ಕೆಂಪು ಮೆಣಸು, ಜೀರಿಗೆ-ಕೊತ್ತಂಬರಿ ಪುಡಿ ಹಾಗೂ ಚಾಟ್ ಮಸಾಲಾ ಹಾಕಿ. ಈಗ ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಹಸಿರು ಚಟ್ನಿ, ಸಿಹಿ ಹುಣಸೆ ಚಟ್ನಿ ಮತ್ತು ಹೆಚ್ಚಿದ ಈರುಳ್ಳಿಯನ್ನು ಸೇರಿಸಿ.
ಮತ್ತೆ ಚೆನ್ನಾಗಿ ಕಲಸಿ, ಎರಡು ಸರ್ವಿಂಗ್ ಬೌಲ್ ಗಳಿಗೆ ಹಾಕಿ ಪ್ರತಿಯೊಂದರ ಮೇಲೆ ಮೊಸರು ಹಾಕಿ. ಜೊತೆಗೆ ಸೇವ್ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ಆಲೂ ಚಾಟ್ ಸವಿಯಲು ಸಿದ್ಧ.