ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಎಂದು ಯಾಕೆ ಇಡಬೇಕು, ಬದಲಿಸುವುದಾದರೇ ತುಳುನಾಡು ಎಂದು ಬದಲಿಸಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಐತಿಹಾಸಿಕ ಸ್ಥಳದ ಹೆಸರನ್ನು ಯಾರು ಕೂಡ ಬದಲಿಸಬಾರದು. ಹೊಸ ಜಿಲ್ಲೆಯನ್ನು ಮಾಡುವುದಾದರೇ ಯಾವ ಹೆಸರನ್ನಾದರೂ ಇಡಲಿ. ಕನ್ನಡ ಎಂದಿದ್ದಕ್ಕೆ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕಾಸರಗೋಡು ಕರ್ನಾಟಕದಿಂದ ಬೇರೆ ಆಯಿತು. ತುಳುನಾಡು ಎಂದು ಇಟ್ಟಿದ್ದರೆ ಕಾಸರಗೋಡು ಬೇರೆಯಾಗಿರುತ್ತಿರಲಿಲ್ಲ ಎಂದರು.
ಕನ್ನಡ ಹೊರತು ಪಡಿಸಿ ಅನ್ಯ ಭಾಷಿಕರ ಸಂಖ್ಯೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದೆ. ಬೇರೆ ರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಿ ಬಹಳ ವರ್ಷ ಕಳೆದಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ಮಾಡಲು ನಾವು ಆಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.