ಹೊಸದಿಗಂತ ವರದಿ,ಬೀದರ್:
ನರ್ಸರಿಯಲ್ಲಿ ಓದುತ್ತಿರುವ ನಾಲ್ಕು ವರ್ಷದ ಬಾಲೆ ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಪ್ರಕರಣ ಇಲ್ಲಿ ವರದಿಯಾಗಿದೆ.
ಶಾಲೆ ಮುಗಿಸಿಕೊಂಡು ಮನೆಗೆ ಹೋದ ಮೇಲೆ ತಾಯಿಯು ಬಾಲಕಿಯ ಸ್ಕೂಲ್ ಡ್ರೆಸ್ ತೆಗೆಯುವಾಗ ರಕ್ತದ ಕಲೆ ಕಂಡಿವೆ. ಈ ವೇಳೆ ಆಕೆಯ ಖಾಸಗಿ ಅಂಗದಿಂದ ರಕ್ತಸ್ರಾವ ಆಗುತ್ತಿರುವುದು ನೋಡಿ ಗಾಬರಿಗೊಂಡಿದ್ದಾಳೆ. ತಕ್ಷಣ ಬಾಲೆಗೆ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಗಿದೆ. ಮಗು ಅಪಾಯದಿಂದ ಪಾರಾಗಿದೆ.
ಈ ಹೀನ ಕೃತ್ಯ ಯಾರು ಎಸಗಿದ್ದಾರೆ ಎಂಬುದು ಗೊತ್ತಾಗಿಲ್ಲ. ನಿತ್ಯ ಆಟೋದಲ್ಲಿ ಬಾಲೆ ಶಾಲೆಗೆ ಹೋಗುತ್ತಿದ್ದಳು. ಆದರೆ ಘಟನೆ ನಡೆದ ದಿನ ಆಟೋದವನು ಬರಲಿಲ್ಲ. ಹೀಗಾಗಿ ಬಾಲಕಿಯ ತಂದೆಯೇ ಶಾಲೆಗೆ ಬಿಟ್ಟು ಮಧ್ಯಾಹ್ನ ವಾಪಸ್ ಮನೆಗೆ ಕರೆತಂದಿದ್ದಾರೆ. ಶಾಲಾ ಅವಧಿಯಲ್ಲಿಯೇ ಬಾಲಕಿ ಜೊತೆಗೆ ಏನಾಯಿತು ಎಂಬುದು ನಿಗೂಢವಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.