ಹೊಸದಿಗಂತ ವರದಿ ಬಳ್ಳಾರಿ:
ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಉಪಾಧ್ಯಕ್ಷರಾಗಿ
ಗಂಗಾವತಿಯ ಎನ್. ಸತ್ಯನಾರಾಯಣ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ನಗರದ ರಾಬಕೋವಿ ಹಾಲು ಒಕ್ಕೂಟದ ಪ್ರಧಾನ ಕಚೇರಿ ಸಭಾಂಗಣದಲ್ಲಿ ಸಹಾಯಕ ಆಯುಕ್ತ ಪ್ರಮೋದ್ ಅವರು ಚುನಾವಣೆ ಪ್ರಕ್ರಿಯೆ ನಡೆಸಿ, ಅಧಿಕೃತವಾಗಿ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್ ಹಾಗೂ ಉಪಾಧ್ಯಕ್ಷರಾಗಿ ಎನ್.ಸತ್ಯನಾರಾಯಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಕಚೇರಿ ಎದುರು ಜಮಾಯಿಸಿದ ನೂರಾರು ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ನಿರ್ಧೇಶಕಾರದ ಕಮಲಮ್ಮ ಗಾವರಾಳ, ಕೃಷ್ಣ ರೆಡ್ಡಿ ಗಲಬಿ, ಸತ್ಯನಾಯರಣ, ಮಂಜುನಾಥ್ ನೀಡಸೇಸಿ, ಭೀಮನಗೌಡ ಪಾಟೀಲ, ಪ್ರವೀಣ್ ಕುಮಾರ್, ಸೀತಾ ರಾಮ ಲಕ್ಷ್ಮೀ, ಸೇರಿದಂತೆ ಮಾಜಿ ಶಾಸಕ ಬಸವರಾಜ್ ಹಿಟ್ನಾಳ್, ಕೊಪ್ಪಳ ಸoಸದ ರಾಜಶೇಖರ್ ಹಿಟ್ನಾಳ್, ಮಾಜಿ ಸoಸದ ಸಂಗಣ್ಣ ಕರಡಿ, ಕಳಕಪ್ಪ ಕಂಬಳಿ, ಅರವಿಂದ ಮುಂದಲಮನಿ, ಮಹೇಶ್ ಗಾವರಾಳ, ಗಗನ್ ನೋಟಗಾರ, ಅಮ್ಜದ್ ಪಟೇಲ್, ಧನಂಜಯ್, ದೊಡ್ಡಪ್ಪ ದೇಸಾಯಿ ಸೇರಿದಂತೆ ಇತರರಿದ್ದರು.