ಇತ್ತೀಚಿನ ದಿನಗಳಲ್ಲಿ ಉಗುರಿಗೆ ಆರ್ಟಿಫಿಶಿಯಲ್ ಎಕ್ಸ್ಟೆನ್ಶನ್‌ಗಳು ಫ್ಯಾಷನ್ ಪ್ರಿಯರಲ್ಲಿ ಬಹಳಷ್ಟು ಪ್ರಚಲಿತಗೊಂಡಿವೆ. ಉಗುರುಗಳಿಗೆ ಹೊಸ ರೂಪ, ನೈಲ್ ಆರ್ಟ್ ಮೂಲಕ ವಿಭಿನ್ನತೆ ನೀಡೋಕೆ ಇದು ಉತ್ತಮ. ಆದರೆ ನೈಸರ್ಗಿಕ ಉಗುರುಗಳ ಮೇಲೆ ಇದರಿಂದಾಗುವ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ.
ಉಗುರು ಎಕ್ಸ್ಟೆನ್ಶನ್ ಯಾಕೆ ಮಾಡಬಾರದು?
ತಜ್ಞರ ಪ್ರಕಾರ ಉಗುರು ಎಕ್ಸ್ಟೆನ್ಶನ್‌ಗಳು ನೈಸ್‌ರ್ಗಿಕ ಉಗುರುಗಳ ದೌರ್ಬಲ್ಯಕ್ಕೆ ಕಾರಣವಾಗಬಹುದು. ವಿಶೇಷವಾಗಿ, ಈ ಎಕ್ಸ್ಟೆನ್ಶನ್ ಅಂಟಿಸಲು ಬಳಸುವ ಫಿಲ್ಲಿಂಗ್ ಪ್ರಕ್ರಿಯೆ ಮತ್ತು ರಾಸಾಯನಿಕ ಅಂಟುಗಳು ಉಗುರುಗಳ ಚರ್ಮಕ್ಕೆ ಕೆಟ್ಟ ಪರಿಣಾಮ ಬೀರುತ್ತವೆ. ನಿರಂತರವಾಗಿ ಇವನ್ನು ಬಳಸುವುದರಿಂದ ಉಗುರುಗಳು ತೆಳುವಾಗಿ, ಸುಲಭವಾಗಿ ತುಂಡಾಗುತ್ತವೆ. ಜೊತೆಗೆ ಸೋಂಕುಗಳು ಮತ್ತು ಅಲರ್ಜಿಗಳಿಗೂ ಕಾರಣವಾಗಬಹುದು. ಅಂಟುಗಳಲ್ಲಿನ ಫಾರ್ಮಾಲ್ಡಿಹೈಡ್ ಉತ್ಪನ್ನಗಳಂತಹ ರಾಸಾಯನಿಕಗಳು ಕೆಂಪಾಗುವಿಕೆ, ತುರಿಕೆ, ಊತ, ಅಥವಾ ಡರ್ಮಟೈಟಿಸ್ ಗೆ ಕಾರಣವಾಗಬಹುದು.
ಮುನ್ನೆಚ್ಚರಿಕೆಗಳು
ಪ್ರತಿಷ್ಠಿತ ಮತ್ತು ನೈರ್ಮಲ್ಯ ಕಾಪಾಡುವ ಸಲೂನ್ ಆಯ್ಕೆ ಮಾಡಬೇಕು. ಎಕ್ಸ್ಟೆನ್ಶನ್‌ನ್ನು ನಿರಂತರವಾಗಿ ಬಳಸದೆ, ಮಧ್ಯೆ ಮಧ್ಯೆ ನೈಸರ್ಗಿಕ ಉಗುರುಗಳಿಗೆ ವಿಶ್ರಾಂತಿ ನೀಡುವುದು ಉತ್ತಮ.
ಅಲರ್ಜಿ ಉಂಟುಮಾಡುವ ಫಾರ್ಮಾಲ್ಡಿಹೈಡ್ ಅಥವಾ ಮೀಥೈಲ್ ಮೆಥಾಕ್ರಿಲೇಟ್ ಇರುವ ಅಂಟುಗಳನ್ನು ಬಳಸಬೇಡಿ.
ಕ್ಯುಟಿಕಲ್ ಗಳನ್ನು ಟ್ರಿಮ್ ಮಾಡದಂತೆ ನಿಮ್ಮ ತಂತ್ರಜ್ಞರಿಗೆ ತಿಳಿಸಿ ಏಕೆಂದರೆ ಅವು ಸೋಂಕುಗಳಿಂದ ರಕ್ಷಿಸುತ್ತವೆ.
ಜೆಲ್ ಉಗುರುಗಳು ಅಕ್ರಿಲಿಕ್ ಗಳಿಗಿಂತ ಕಡಿಮೆ ಹಾನಿಕಾರಕವಾಗಿವೆ ಏಕೆಂದರೆ ಅವು ಹೆಚ್ಚು ಹೊಂದಿಕೊಳ್ಳುತ್ತವೆ ಮತ್ತು ಕಡಿಮೆ ಫಿಲ್ಲಿಂಗ್ ಅಗತ್ಯವಿರುತ್ತದೆ. ಹಾನಿಕಾರಕ ಪದಾರ್ಥಗಳನ್ನು ತಪ್ಪಿಸಿ.
ಸುರಕ್ಷಿತ ಪರ್ಯಾಯಗಳು
ಮನೆದಲ್ಲಿ ನೈಸರ್ಗಿಕ ಉಗುರು ಬೆಳೆಸಲು ಯತ್ನಿಸಬೇಕು.
ಉಗುರುಗಳು ಒಡೆಯುವುದನ್ನು ತಡೆಯಲು ಎಣ್ಣೆಗಳು ಅಥವಾ ಕ್ರೀಮ್ ಗಳಿಂದ ಹೈಡ್ರೇಟ್ ಮಾಡಿ.
ಉಗುರುಗಳ ಆರೋಗ್ಯಕ್ಕೆ ಮೊಟ್ಟೆ ಮತ್ತು ಬೀಜಗಳಂತಹ ಬಯೋಟಿನ್ ಸಮೃದ್ಧ ಆಹಾರಗಳನ್ನು ಸೇವಿಸಿ.