ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ದೇಶ ಸಾವಿರಾರು ವರ್ಷ ಹಳೇ ಹಿಂದು ಶಿವನ ದೇವಾಲಯ ಹಾಗೂ ಸುತ್ತಮುತ್ತಲಿನ ದೇಗುಲಕ್ಕಾಗಿ ಯುದ್ಧ ಆರಂಭಿಸಿದೆ. ರಾಕೆಟ್ ದಾಳಿ, ಆರ್ಟಿಲರಿ, ಮಿಸೈಲ್ ಸೇರಿದಂತೆ ಹಲವು ಶಸ್ತಾಸ್ತ್ರಗಳ ಬಳಕೆ ಮಾಡುತ್ತಿದೆ. ಇದರ ಪರಿಣಾಮ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಥಾಯ್ಲೆಂಡ್‌ನ ಭಾರತೀಯ ರಾಯಭಾರ ಕಚೇರಿ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸದ್ಯ ಥಾಯ್ಲೆಂಡ್‌ನ 7 ಪ್ರಾಂತ್ಯಗಳಿಗೆ ಭೇಟಿ ನೀಡದಂತೆ ಸೂಚನೆ ನೀಡಿದೆ.
ಥಾಯ್ಲೆಂಡ್ ಭಾರತೀಯ ರಾಯಭಾರ ಕಚೇರಿ ಭಾರತೀಯರಿಗೆ ಮಾರ್ಗಸೂಚಿ ಪ್ರಕಟಿಸಿದೆ. ಗುರುವಾರ ದಂದು ಕಾಂಬೋಡಿಯಾ ಏಕಾಏಕಿ ಥಾಯ್ಲೆಂಡ್ ಮೇಲೆ ರಾಕೆಟ್ ದಾಳಿ ನಡೆಸಿದ್ದರೆ, ಇತ್ತ ಥಾಯ್ಲೆಂಡ್ ಏರ್ ಸ್ಟ್ರೈಕ್ ಮೂಲಕ ಪ್ರತಿದಾಳಿ ನಡೆಸಿದೆ. ಶುಕ್ರವಾರವೂ ದಾಳಿ ಮುಂದುವರಿದಿದೆ.
ಹೀಗಾಗಿ ಥಾಯ್ಲೆಂಡ್ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ತಮ್ಮ ಭಾರತೀಯ ನಾಗರೀಕರಿಗೆ ಎಚ್ಚರಿಕೆ ನೀಡಿದೆ.
ಯುದ್ಧದಿಂದ ನಿರ್ಬಂಧಿಸಿರುವ ಥಾಯ್ಲೆಂಡ್‌ನ 7 ಪ್ರಾಂತ್ಯಗಳು: ಉಬೋನ್ ರಚ್‌ತಾನಿ, ಸುರಿನ್, ಸಿಸಾಕೆಟ್,ಬುರಿಯಮ್,ಸಾ ಕಾವೋ, ಚಂತಬುರಿ, ಟ್ರಾಟ್.
ಇಲ್ಲಿ ಸಾವಿರಾರು ವರ್ಷಗಳ ಪುರಾತನ ಹಿಂದು ದೇವಾಲಯಗಳಿವೆ. ಇಷ್ಟೇ ಅಲ್ಲ ಪ್ರಾಕೃತಿಕವಾಗಿಯೂ ಸುಂದರ ತಾಣಗಳಾಗಿದೆ. ಹೀಗಾಗಿ ಭಾರತ ಮಾತ್ರವಲ್ಲ ಹಲವು ದೇಶಗಳಿಂದ ಈ ಪ್ರಾಂತ್ಯಗಳಿಗೆ ಭೇಟಿ ನೀಡುತ್ತಾರೆ. ಆದರೆ ಸದ್ಯ ಯುದ್ಧದ ಸಂಘರ್ಷ ಹೆಚ್ಚಾಗಿರುವ ಕಾರಣ ಈ ಪ್ರದೇಶಕ್ಕೆ ಭೇಟಿ ನೀಡುವುದು ಸುರಕ್ಷಿತವಲ್ಲ ಎಂದು ಸೂಚಿಸಲಾಗಿದೆ.