ಆನಾದಿಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಮದುವೆಯು ಶ್ರೇಷ್ಠ ಸಂಸ್ಕಾರಗಳಲ್ಲಿ ಒಂದಾಗಿದ್ದು, ಅದರ ಪ್ರತಿ ಹಂತದ ಕಾರ್ಯಕ್ರಮಕ್ಕೂ ಆರೋಗ್ಯ, ಸೌಂದರ್ಯ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಮದುವೆ ಮೊದಲು ವಧು ವರರರಿಗೆ ಅರಿಶಿಣ ಹಚ್ಚುವ ಸಂಪ್ರದಾಯ ಪ್ರಚಲಿತದಲ್ಲಿದೆ. ಇದು ಕೇವಲ ಆಚರಣೆ ಅಲ್ಲ; ಪೌರಾಣಿಕ, ವೈಜ್ಞಾನಿಕ ಮತ್ತು ವೈದ್ಯಕೀಯ ಕಾರಣಗಳು ಇದಕ್ಕಿವೆ.
ಶರೀರ ಶುದ್ಧಿಕರಣ ಮತ್ತು ಚರ್ಮದ ಕಾಂತಿ
ಅರಿಶಿಣವು ನೈಸರ್ಗಿಕ ಆಂಟಿ-ಸೆಪ್ಟಿಕ್ ಆಗಿದ್ದು, ಚರ್ಮದ ಮೇಲಿನ ಬಾಕ್ಟೀರಿಯಾ, ಅಲರ್ಜಿ, ಸ್ಮಿತ್ತತೆಗಳನ್ನು ನಿವಾರಿಸುತ್ತದೆ. ಇದರಿಂದ ವಧು ವರರ ಚರ್ಮ ಉಜ್ವಲವಾಗಿ, ತಾಜಾ ಕಾಣುತ್ತದೆ. ಮದುವೆಯಂದು ಮದುಮಗಳ ಮುಖ ಹೊಳೆಯಲು ಇದು ಸಹಾಯಕ.
ಪವಿತ್ರತೆ ಮತ್ತು ಶುಭದ ಸಂಕೇತ
ಆಧ್ಯಾತ್ಮಿಕವಾಗಿ ಅರಿಶಿಣವನ್ನು ಶುದ್ಧತೆ, ದೇವತ್ವ ಮತ್ತು ಶುಭದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಮದುವೆ ಎಂಬ ದೈವಿಕ ಬಾಂಧವ್ಯದ ಆರಂಭಕ್ಕೆ ಅರಿಶಿಣ ಹಚ್ಚುವುದು ಸಕಾರಾತ್ಮಕ ಶಕ್ತಿಯು ಪ್ರವಹಿಸಲೆಂದು ನಂಬಲಾಗುತ್ತದೆ.
ಒತ್ತಡ ಕಡಿಮೆ ಮಾಡುತ್ತದೆ
ಮದುವೆ ಸಮಯದ ತಯಾರಿ ಹಾಗೂ ತೀವ್ರ ಮನಸ್ಥಿತಿಯ ಮಧ್ಯೆ ಅರಶಿನ ಹಚ್ಚುವ ಮೂಲಕ ಶರೀರದ ತಾಪಮಾನ ಕಡಿಮೆಯಾಗುವುದು, ನರವ್ಯೂಹ ಶಾಂತವಾಗುವುದು. ಇದು ವಧು ವರರರಿಗೆ ಮಾನಸಿಕ ಶಾಂತಿ ಹಾಗೂ ಆತ್ಮಸ್ಥೈರ್ಯ ನೀಡುತ್ತದೆ.
ನಕಾರಾತ್ಮಕ ಶಕ್ತಿಯಿಂದ ರಕ್ಷಣೆ
ಹಿಂದಿನ ನಂಬಿಕೆಯ ಪ್ರಕಾರ, ಮದುವೆಯ ಪೂರ್ವಕಾಲದಲ್ಲಿ ವಧು ವರರರಿಗೆ ‘ದೃಷ್ಟಿ ತಗುಲಬಹುದು ಎನ್ನುವ ನಂಬಿಕೆ ಇದೆ. ಅರಶಿನ ಹಚ್ಚುವುದು ದುಷ್ಟಶಕ್ತಿಗಳಿಂದ ರಕ್ಷಣೆ ಹಾಗೂ ಸಕಾರಾತ್ಮಕ ವಾತಾವರಣ ನಿರ್ಮಿಸುವ ಪ್ರಯತ್ನ.
ಮದುವೆ ಸಂದರ್ಭ ಅರಿಶಿಣ ಹಚ್ಚುವ ಸಂಪ್ರದಾಯವು ಕೇವಲ ಸೌಂದರ್ಯವರ್ಧನೆಯಲ್ಲ, ಆರೋಗ್ಯ, ಶುದ್ಧತೆ, ಮನಸ್ಸಿನ ಸಮತೋಲನ ಹಾಗೂ ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಲು ಸಹಾಯಕವಾಗಿರುವುದು. ಇದೊಂದು ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಮಿಶ್ರ ಸಂಸ್ಕೃತಿಯ ಪ್ರತೀಕವಾಗಿದೆ.