ಹಿರಿಯರು ಯಾವಾಗಲೂ ಒಂದು ಮಾತು ಹೇಳ್ತಿರ್ತಾರೆ ಸಂಜೆಯ ನಂತರ ಉಗುರುಗಳನ್ನು ಕತ್ತರಿಸಬೇಡ ಅಂತ. ಆ ಮಾತು ಇತ್ತೀಚಿನ ಪೀಳಿಗೆಯವರಿಗೆ ಮೂಢನಂಬಿಕೆಯಂತೆ ತೋಚಬಹುದು. ಆದರೆ ಅದರ ಹಿಂದೆ ಆಧ್ಯಾತ್ಮಿಕ, ಆಯುರ್ವೇದ, ಜ್ಯೋತಿಷ್ಯ ಮತ್ತು ತಾರ್ಕಿಕ ಕಾರಣಗಳಿವೆ. ಅದನ್ನ ತಿರಸ್ಕಾರ ಮಾಡೋದು ಸಮಂಜಸವಲ್ಲ.
ಆಧ್ಯಾತ್ಮಿಕ ಕಾರಣ:
ಹಿಂದು ಧರ್ಮದಲ್ಲಿ ಸಂಜೆಯ ಸಮಯ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಗೆ ಬರುವ ಶುಭ ಕಾಲ. ಈ ವೇಳೆ ಉಗುರು ಕತ್ತರಿಸುವುದು ಅಶುದ್ಧತೆ ತರುತ್ತದೆ. ಇದರಿಂದ ದೇವಿ ಕೋಪಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಇದೆ. ರಾಹು-ಕೇತು ಪ್ರಭಾವವೂ ಇರುತ್ತದೆ ಎಂದು ಧಾರ್ಮಿಕ ಗ್ರಂಥಗಳು ಹೇಳುತ್ತವೆ.
ಆಯುರ್ವೇದದ ಪ್ರಕಾರ:
ಸಂಜೆಯ ನಂತರ ದೇಹ ವಿಶ್ರಾಂತಿ ಸ್ಥಿತಿಗೆ ಹೋಗುತ್ತದೆ. ಈ ಸಮಯದಲ್ಲಿ ಉಗುರುಗಳನ್ನು ಕತ್ತರಿಸಿದರೆ ನರಮಂಡಲಕ್ಕೆ ಲಿಂಕ್ ಹೊಂದಿರೋ ಉಗುರುಗಳನ್ನ ಕತ್ತರಿಸುವುದ್ರಿಂದ ಈ ಹಂತದಲ್ಲಿ ದೇಹದ ಶಕ್ತಿಗೆ ಅಡ್ಡಿಪಡಿಸುತ್ತೆ. ದೇಹದ ಚಯಾಪಚಯ ಕ್ರಿಯೆಗೆ ಅಡ್ಡಿ ಉಂಟಾಗಬಹುದು ಎನ್ನುವ ಅಭಿಪ್ರಾಯ ಆಯುರ್ವೇದದಲ್ಲಿದೆ.
ಜ್ಯೋತಿಷ್ಯ ದೃಷ್ಟಿಕೋನ:
ಚಂದ್ರನ ಶಕ್ತಿ ಈ ಸಮಯದಲ್ಲಿ ಹೆಚ್ಚು ಇರುತ್ತದೆ. ಚಕ್ರಗಳ ಶಕ್ತಿಗೆ ಸಂಬಂಧಿಸಿದಂತೆ, ಈ ಸಮಯದಲ್ಲಿ ಉಗುರು ಕತ್ತರಿಸೋದು ಶಕ್ತಿಯ ಅಸಮತೋಲನಕ್ಕೆ ಕಾರಣವಾಗಬಹುದು. ಭಾವನೆಗಳು ಗೊಂದಲಗೊಳ್ಳಬಹುದು ಎನ್ನುವುದು ನಂಬಿಕೆ.
ತಾರ್ಕಿಕ/ವೈಜ್ಞಾನಿಕ ಕಾರಣ:
ಹಳೆಯ ಕಾಲದಲ್ಲಿ ವಿದ್ಯುತ್ ಇರಲಿಲ್ಲ. ಸಂಜೆಯಿಂದಲೇ ಕತ್ತಲೆಯ ವಾತಾವರಣ. ಆ ಸಮಯದಲ್ಲಿ ಉಗುರುಗಳ ಉದ್ದ, ಸುತ್ತು ಸರಿಯಾಗಿ ಕಾಣುತ್ತಿರಲಿಲ್ಲ. ಇದರಿಂದ ಗಾಯವಾಗೋ ಸಾಧ್ಯತೆಗಳು ಹೆಚ್ಚಾಗುತ್ತಿತ್ತು. ಉಗುರುಗಳು ಬಿದ್ದು ಆಹಾರದಲ್ಲಿ ಸೇರಿ ಆರೋಗ್ಯ ಹಾನಿಯೂ ಆಗಬಹುದು.
ಆರೋಗ್ಯ ದೃಷ್ಟಿಯಿಂದ:
ಉಗುರುಗಳಲ್ಲಿ ಧೂಳಿನ ಕಣಗಳು, ಬ್ಯಾಕ್ಟೀರಿಯಾ ಇರುತ್ತವೆ. ಸಂಜೆ ಊಟದ ಸಮಯ. ಈ ಸಮಯದಲ್ಲಿ ಕತ್ತರಿಸಿದ ಉಗುರುಗಳು ಇಡೀ ಮನೆಯಲ್ಲಿರಬಹುದು. ಅದು ಆಹಾರಕ್ಕೆ ಸೇರುತ್ತೆ. ವಿಷಪೂರಿತ ಆಹಾರ ಸೇವನೆಯಿಂದ ಅನಾರೋಗ್ಯ ಸಾಧ್ಯ.
ಪೂರ್ವಜರ ಆತ್ಮ ನಂಬಿಕೆ:
ಕೆಲವರು ಸಂಜೆಯ ಸಮಯದಲ್ಲಿ ಆತ್ಮಗಳು ಸುತ್ತಾಡುತ್ತವೆ ಎಂದು ನಂಬುತ್ತಾರೆ. ಈ ವೇಳೆಯಲ್ಲಿ ಉಗುರುಗಳನ್ನು ಕತ್ತರಿಸುವುದು ಪೂರ್ವಜರ ಆತ್ಮಗಳಿಗೆ ತೊಂದರೆ ತಂದೀತು ಎಂಬ ಜನಸಾಮಾನ್ಯ ನಂಬಿಕೆ ಇದೆ.
ಹೀಗಾಗಿ, ಸಂಜೆ ನಂತರ ಉಗುರು ಕತ್ತರಿಸಬೇಡ ಅನ್ನೋ ಮಾತು ಬೇರೆಯದೇನೂ ಅಲ್ಲ. ಅದು ಹಿರಿಯರ ಅನುಭವದ ಸಾರ, ಶಾಸ್ತ್ರ-ಶಕ್ತಿ-ಸೌಕರ್ಯಗಳ ಮಿಶ್ರಣ. ಕಾಲ ಬದಲಾಗ್ತಾ ಇದ್ದರೂ, ಕೆಲವು ರೂಢಿಗಳನ್ನು ವೈಜ್ಞಾನಿಕವಾಗಿ ನೋಡಿ ಗೌರವದಿಂದ ಪಾಲನೆ ಮಾಡುವುದುನಮ್ಮ ಆರೋಗ್ಯಕ್ಕೆ ಉತ್ತಮ.